ಶುಕ್ರವಾರ, ಜೂನ್ 16, 2023
ಜೂ.17 ರಂದು ಗುಡದೂರು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.16(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 33/110ಕೆ.ವಿ ಗುಡದೂರು ವಿದ್ಯುತ್ ವಿತರಣಾ ಉಪಕೇಂದ್ರದ ಹಾಗೂ ಮಾರ್ಗದ ನಿರ್ವಹಣೆ ಕಾಮಗಾರಿ ಕಾರ್ಯವನ್ನು ತುರ್ತಾಗಿ ಕೈಗೊಂಡಿರುವುದರಿಂದ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ ಐಪಿ ಮತ್ತು ಎನ್‍ಜೆವೈ ಮಾರ್ಗಗಳಲ್ಲಿ ಜೂ.17 ರಂದು ಬೆಳಗ್ಗೆ 10ರಿಂದ ಸಂಜೆ 04ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಸಂತೋಷಿ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-01 ಫೀಡರ್‍ನ ಡಿ.ಕಗ್ಗಲ್ ಐಪಿ ಮಾರ್ಗದ ಡಿ.ಕಗ್ಗಲ್ ಗ್ರಾಮ, ಎಫ್-02 ಫೀಡರ್‍ನ ಗುಡುದೂರು ಐಪಿ ಮಾರ್ಗದ ಗುಡುದೂರು ಗ್ರಾಮ, ಹಂದಿಹಾಳ್ ಗ್ರಾಮ, ಎಫ್-03 ಫೀಡರ್‍ನ ಹಂದಿಹಾಳ್ ಐಪಿ ಮಾರ್ಗದ ಹಂದಿಹಾಳ್, ಚಾನಾಳ್ ಗ್ರಾಮ, ಎಫ್-04 ಫೀಡರ್‍ನ ಗುಡುದೂರು ಎನ್.ಜೆ.ವೈ ಮಾರ್ಗದ ಹಂದಿಹಾಳ್, ಚಾನಾಳ್, ಗುಡುದೂರು ಗ್ರಾಮಗಳು. ಎಫ್-05 ಫೀಡರ್‍ನ ಚಾನಾಳ್ ಐಪಿ ಮಾರ್ಗದ ಚಾನಾಳ್ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ