ಸೋಮವಾರ, ಜೂನ್ 26, 2023
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ
ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ):
ಕೃಷಿ ಇಲಾಖೆಯಿಂದ 2023-24 ನೇ ಸಾಲಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ.10,000 ಗಳನ್ನು ಪಡೆಯುತ್ತಿರುವ ರೈತ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ-ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ ಮುಂದಿನ ಕಂತು ತಮ್ಮ ಖಾತೆಗೆ ಜಮ ಅಗುವುದಿಲ್ಲ ಹಾಗೂ ಮುಂದಿನ ಯೋಜನೆಯ ಆರ್ಥಿಕ ಸೌಲಭ್ಯದಿಂದ ವಂಚಿತರಾಗಬಹುದು. ಆದ್ದರಿಂದ ಇಲ್ಲಿಯವರೆಗೂ ಇ-ಕೆವೈಸಿ ಮಾಡಿಸದ ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಹಾಗೂ ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಇ-ಕೆವೈಸಿ ಮಾಡಿಸಿಕೊಳ್ಳಲು ತಮ್ಮ ಹತ್ತಿರದ ಗ್ರಾಹಕರ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರ, ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಓಟಿಪಿ ಅಥವಾ ಬಯೋ-ಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ರೈತರು ತಾವೇ ಸ್ವತಃ ಖುದ್ದಾಗಿ Pಒ-ಞisಚಿಟಿ ತಿebsiಣe (ತಂತ್ರಾಂಶ)ದಲ್ಲಿ ಲಿಂಕನ್ನು ಬಳಸಿ ಓಟಿಪಿ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು ಅಥವಾ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಪೆÇೀಸ್ಟಲ್ ಅಕೌಂಟ್ (PಔSಖಿಂಐ ಂಅಅಔUಓಖಿ) ತೆರೆಯುವ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಮುಖ ತೋರಿಸುವ (ಈಚಿಛಿe ಖeಛಿogಟಿisಚಿಣioಟಿ) ಂಠಿಠಿ ಮೂಲಕ ಡೌನ್‍ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ನೊಂದಾಯಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ