ಬುಧವಾರ, ಜೂನ್ 21, 2023

ರೂಪನಗುಡಿ: ಆರೋಗ್ಯ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ): ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರದಂದು ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರ, ಯೋಗ ತರಬೇತಿ ನಡೆಸಲಾಯಿತು. ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣ ಬಾಬು ಅವರು ಮಾತನಾಡಿ, ಬಿಡುವಿಲ್ಲದ ನಮ್ಮ ದೈನಂದಿನ ಜೀವನದಲ್ಲಿ ಪ್ರತಿ ದಿನ ಕನಿಷ್ಠ ಐದು ನಿಮಿಷ ಯೋಗ ಮಾಡುವ ಮೂಲಕ ಅದರ ಲಾಭ ಪಡೆಯಬೇಕು ಎಂದು ಹೇಳಿದರು. ಯೋಗವು ಶಕ್ತಿ, ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಬೆನ್ನು ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಯೋಗ ಸಂಧಿವಾತದ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಯೋಗ ಒಳ್ಳೆಯದು ಎಂದು ತಿಳಿಸಿಕೊಟ್ಟರು. ಯೋಗವು ನಿಮ್ಮನ್ನು ವಿಶ್ರಾಂತಿಗೊಳಿಸುವುದಲ್ಲದೆ ಉತ್ತಮ ನಿದ್ರೆಗೆ ಸಹಕಾರಿ ಮಾಡುತ್ತದೆ. ಶಕ್ತಿ ಹೆಚ್ಚಾಗುವ ಜೊತೆಗೆ ಮೂಡ್ ಬೂಸ್ಟರ್ ತುಂಬುತ್ತದೆ. ನಿಭಾಯಿಸಲು ಯೋಗ ಉತ್ತಮ ಎಂದು ತಿಳಿಸಿದರು. ನಂತರದಲ್ಲಿ ಎಲ್ಲರಿಗೂ ಯೋಗದ ವಿವಿಧ ಭಂಗಿಗಳನ್ನು ತೋರಿಸಿ ಅದರಂತೆ ಮಾಡಲು ತಿಳಿಸಿಕೊಟ್ಟರು. ದಿನನಿತ್ಯ ಮಾಡುವಂತೆ ಸಲಹೆ ನೀಡಿದರು. ಐಓ ವೀರಾರೆಡ್ಡಿ ಹೆಚ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಹಾಗೂ ಸದಸ್ಯರು ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ