ಬುಧವಾರ, ಜೂನ್ 14, 2023
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಜೂ.15ರಂದು
ಬಳ್ಳಾರಿ,ಜೂ.14(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಸೌತ್ ವಿದ್ಯುತ್ ಉಪವಿಭಾಗ-1 ಕೇಂದ್ರದಿಂದ ಎಫ್-25 ಮತ್ತು ಎಫ್-46 ಫಿûೀಡರ್‍ಗಳ ತುರ್ತು ನಿರ್ವಾಹಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಜೂ.15ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು: ಕಾರ್ಕಲ ತೋಟ, ಹನುಮಾನ್ ನಗರ, ಪಾತ್ರಬೂದಿಹಲ್, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ರ್ಮಾಕೆಟ್, ಸಣ್ಣ ಕೈಗಾರಿಕಾ ಕಂಪನಿ ಹಾಗೂ ಪಿಲೆಟ್ ಮಾರಮ್ಮ ಗುಡಿ ಹಿಂದುಗಡೆ, ಇಂಡಸ್‍ಟ್ರಿಯಲ್ ಏರಿಯಾ ಹಂತ-1 ಇನ್ನೂ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ