ಬುಧವಾರ, ಜೂನ್ 14, 2023

ಹಿರಿಯ ನಾಗರಿಕರ ಶೋಷಣೆ ಅಂಗವಾಗಿ ಜಾಥಾ ಹಾಗೂ ಕಾರ್ಯಕ್ರಮ ಜೂ.15 ರಂದು ಬಳ್ಳಾರಿ,ಜೂ.14(ಕರ್ನಾಟಕ ವಾರ್ತೆ): ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ (ರಿ) ಬೆಂಗಳೂರು, ರಾಷ್ಟ್ರೀಯ ಹಿಲಿಯ ನಾಗರಿಕರ ಸಹಾಯವಾಣಿ 14567, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ ಬಳ್ಳಾರಿ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ 1090 ಇವರ ಸಂಯುಕ್ತಾಶ್ರಯದಲ್ಲಿ. ಜೂ.15 ರಂದು ಬೆಳಗ್ಗೆ 9.30ಕ್ಕೆ ಗಾಂಧಿನಗರ ಪೊಲೀಸ್ ಸ್ಟೇಷನ್ ಆವರಣದಲ್ಲಿ ಹಿರಿಯ ನಾಗರಿಕರ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ವೇದಿಕೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್.ಎನ್.ಹೊಸಮನೆ ಅವರು ಉದ್ಘಾಟಿಸುವರು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣಧಿಕಾರಿ ಎಚ್.ಎಮ್. ಗೋವಿಂದಪ್ಪ ಅವರು ಅಧ್ಯಕ್ಷತೆ ವಹಿಸುವರು. ಉಪವಿಭಾಗಾಧಿಕಾರಿ ಹೇಮಂತ ಕುಮಾರ ಅವರು ಗೌರವಾನ್ವಿತ ಉಪಸ್ಥಿತಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಕುಮಾರ ಕೆ.ಎಚ್, ಪೊಲೀಸ್ ವರೀಷ್ಠಾಧಿಕಾರಿ ರಂಜಿತ ಕುಮಾರ ಭಂಡಾರು, ಹಿರಿಯ ನಾಗರಿಕರ ಸಹಾಯವಾಣಿ ಹಾಗೂ ಸ್ಮೈಲ್ ಸಂಸ್ಥೆಯ ಅಧ್ಯಕ್ಷ ಉಮಪತಿಗೌಡ ಕೆ.ಎಮ್, ಜಿಲ್ಲಾ ಸಂಯೋಜಕರ ಟೇಕ್‍ರಾಜ, ಬಳ್ಳಾರಿ ರಾಷ್ಟ್ರೀಯ ಹಿರಿಯ ಸಹಾಯವಾಣಿ-14567 ಕ್ಷೇತ್ರ ನಿರ್ವಾಹಣಾಧಿಕಾರಿ ಮುತ್ತಣ್ಣ.ಜಿ, ಚಿತ್ರದುರ್ಗ ರಾಷ್ಟ್ರೀಯ ಹಿರಿಯ ಸಹಾಯವಾಣಿ-14567 ಕ್ಷೇತ್ರ ನಿರ್ವಾಹಣಾಧಿಕಾರಿ ಚಲಪತಿ ಅವರು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿರಲಿದ್ದಾರೆ. *ಜಾಥಾ ನಡೆಯುವ ಮಾರ್ಗ:* ಗಾಂಧಿ ನಗರ ಪೆÇಲೀಸ್ ಠಾಣೆಯಿಂದ ಹೊರಟು ಡಿ.ಸಿ ಕಚೇರಿಯವರೆಗೂ ನಡೆಯಲಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ