ಸೋಮವಾರ, ಜೂನ್ 19, 2023

ಕುವೈತ್‍ನಲ್ಲಿ ಚಾಲಕರ ಹುದ್ದೆಗೆ ನೋಂದಣಿಗೆ ಆಹ್ವಾನ ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ) ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಕುವೈತ್ ದೇಶದಲ್ಲಿ ಚಾಲಕರ ಕೆಲಸಕ್ಕಾಗಿ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹರು ನೊಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಸ್.ಬಸವರಾಜಪ್ಪ ಅವರು ತಿಳಿಸಿದ್ದಾರೆ. ಅರ್ಹತೆ: 30 ರಿಂದ 39 ವಯಸ್ಸಾಗಿರಬೇಕು. ಜಿಸಿಸಿ ವಿದೇಶದಲ್ಲಿ ಕೆಲಸ ಮಾಡಿರುವ ಅನುಭವಿಗಳಾಗಿರಬೇಕು. ವೇತನ: 37,500 ರಿಂದ 40,200 ವರೆಗೆ (ಪ್ರತಿ ತಿಂಗಳಿಗೆ) ಇರುತ್ತದೆ. ಇಂಗ್ಲೀಷ್ ಮತ್ತು ಅರೆಬಿಕ್ ಭಾಷೆ ಮಾತನಾಡ ಬಲ್ಲವರಾಗಿರಬೇಕು. ಸೌಲಭ್ಯ: ವಿಸಾ, ವಿಸಾ ಸ್ಟಾಂಪಿಂಗ್, ವಿಮಾನ ಟಿಕೇಟ್, ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ಸ್ ಕ್ಲಿಯರೆನ್ಸ್, ಊಟ ಮತ್ತು ವಸತಿ ಸೌಲಭ್ಯ ಹಾಗೂ ಆರೋಗ್ಯ ರಕ್ಷಣೆ, ವಿಮೆ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು https://kvtsdc.com ನಲ್ಲಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಅನಂತಪುರ ರಸ್ತೆಯ ಹೊಸ ಜಿಲ್ಲಾಡಳಿತ ಭವನದ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8073852104, 9964502514 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ