ಸೋಮವಾರ, ಜೂನ್ 19, 2023

ಎಮ್ಮಿಗನೂರು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಜೂ.20 ರಂದು ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ): 33/11 ಕೆವಿ ಎಮ್ಮಿಗನೂರು ವಿದ್ಯುತ್ ವಿತರಣಾ ಉಪಕೇಂದ್ರದ ಹಾಗೂ ಮಾರ್ಗದ ನಿರ್ವಹಣೆ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜೂ.20 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ವ್ಯಾಪ್ತಿಯ ಎಲ್ಲಾ ಐಪಿ ಮತ್ತು ಎನ್‍ಜೆವೈ ಮಾರ್ಗಗಳಲ್ಲಿನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಿ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಎಫ್-01 ಫೀಡರ್‍ನ ಗುತ್ತಿಗನೂರು ಐಪಿ ಮಾರ್ಗದ ಗುತ್ತಿಗನೂರು ಗ್ರಾಮ, ಎಮ್ಮಿಗನೂರು ಗ್ರಾಮ. ಎಫ್-02 ಫೀಡರ್‍ನ ಸೋಮಲಾಪುರ ಐಪಿ ಮಾರ್ಗದ ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್. ಎಫ್-03 ಫೀಡರ್‍ನ ಎಮ್ಮಿಗನೂರು ಪಟ್ಟಣ ಮಾರ್ಗದ ಎಮ್ಮಿಗನೂರು ಗ್ರಾಮ ಪಂಚಾಯಿತಿ, ಓರ್ವಾಯಿ ಗ್ರಾಮ ಪಂಚಾಯಿತಿ. ಎಫ್-04 ಫೀಡರ್‍ನ ಮುದ್ದಾಪುರ ಐಪಿ ಮಾರ್ಗದ ಎಮ್ಮಿಗನೂರು, ಬಳಾಪುರ, ಮುದ್ದಾಪುರ. ಎಫ್-05 ಫೀಡರ್‍ನ ನೆಲ್ಲುಡಿ ಎನ್‍ಜೆವೈ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಮೆಹಬೂಬ ನಗರ, ಶಾಂತಿ ನಗರ, ಶಂಕರ್ ಸಿಂಗ್ ಕ್ಯಾಂಪ್, ನೆಲ್ಲುಡಿ ಹಾಗೂ ಎಫ್-06 ಫೀಡರ್‍ನ ನೆಲ್ಲುಡಿ ಐಪಿ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಮೆಹಬೂಬ ನಗರ, ಶಾಂತಿ ನಗರ, ಶಂಕರ್ ಸಿಂಗ್ ಕ್ಯಾಂಪ್, ನೆಲ್ಲುಡಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ರೈತರು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ