ಗುರುವಾರ, ಜೂನ್ 15, 2023
ಕುವೈತ್‍ನಲ್ಲಿ ಮನೆ ಕೆಲಸಕ್ಕಾಗಿ ಅರ್ಹ ಮಹಿಳೆಯರಿಂದ ನೋಂದಣಿಗೆ ಆಹ್ವಾನ
ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ)
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಕುವೈತ್ ದೇಶದಲ್ಲಿ ಮನೆ ಕೆಲಸಕ್ಕಾಗಿ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಸ್.ಬಸವರಾಜಪ್ಪ ಅವರು ತಿಳಿಸಿದ್ದಾರೆ.
ಅರ್ಹತೆ: 30 ರಿಂದ 39 ವಯಸ್ಸಾಗಿರಬೇಕು. ಅನುಭವಿಗಳು ಹಾಗೂ ಹೊಸಬರು ನೊಂದಣಿ ಮಾಡಿಕೊಳ್ಳಬಹುದು. ವೇತನ: (ಪ್ರತಿ ತಿಂಗಳಿಗೆ) 32,000 ರಿಂದ 34,800 ವರೆಗೆ ಇರುತ್ತದೆ.
ಸೌಲಭ್ಯ: ವಿಸಾ, ವಿಸಾ ಸ್ಟಾಂಪಿಂಗ್, ವಿಮಾನ ಟಿಕೇಟ್, ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ಸ್ ಕ್ಲಿಯರೆನ್ಸ್ ಊಟ ಮತ್ತು ವಸತಿ ಸೌಲಭ್ಯ ಹಾಗೂ ಆರೋಗ್ಯ ರಕ್ಷಣೆ, ವಿಮೆ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು https://kvtsdc.com ನಲ್ಲಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ನಗರದ ಅನಂತಪುರ ರಸ್ತೆಯ ಹೊಸ ಜಿಲ್ಲಾಡಳಿತ ಭವನದ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8073852104, 9964502514 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ