ಸೋಮವಾರ, ಜೂನ್ 19, 2023
ಮಾಜಿ ಸೈನಿಕರ, ವಿಧವೆಯರ, ಮಾಜಿ ಸೈನಿಕರ ಅವಲಂಬಿತರ ಕೊಡುಗೆ ಆರೋಗ್ಯ ಯೋಜನೆಯ ಸಲಹಾ ಸಮಿತಿ ಸಭೆ: ಸಲಹೆ-ಸೂಚನೆಗಳಿದ್ದಲ್ಲಿ ಸಲ್ಲಿಸಿ
ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ):
ಬೆಳಗಾವಿಯ ನಿಲ್ದಾಣದ ಪ್ರಧಾನ ಕಚೇರಿಯಿಂದ ಜೂ.೦೧ ರಂದು ಸಲಹಾ ಸಮಿತಿ ಸಭೆ ಕರೆದಿದ್ದು, ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲೆಗಳ ಮಾಜಿ ಸೈನಿಕರು, ವಿಧವೆಯರು, ಮಾಜಿ ಸೈನಿಕರ ಅವಲಂಬಿತರು ಆರೋಗ್ಯ ಯೋಜನೆಯ ಸಲಹಾ ಸಮಿತಿ ಸಭೆಯ ಇಅಊS ಬಗ್ಗೆ ತಮ್ಮ ಯಾವುದೇ ಸಲಹೆ, ಸೂಚನೆ ಅಥವಾ ದೂರು ಇದ್ದರೆ ಧಾರವಾಡದ ಜಿಲ್ಲಾಧಿಕಾರಿಗಳ ಕಾರ್ಯಾಲಯ ಆವರಣದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಕ್ಕೆ ಜೂನ್ ೨೭ರೊಳಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಧಾರವಾಡದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಎಮ್.ಎಸ್.ಲೋಲಾಕ್ಷ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ