ಮಂಗಳವಾರ, ಜೂನ್ 13, 2023

ಜೂ.16 ರಂದು ಅಪ್ರೆಂಟಿಸ್‍ಶಿಪ್ ಶಿಶುಕ್ಷು ತರಬೇತಿ ಜಾಗೃತಿ ಕಾರ್ಯಾಗಾರ ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ): ಭಾರತ ಸರ್ಕಾರ ಪ್ರಾಂತೀಯ ನಿರ್ದೇಶನಾಲಯ (ಖಆSಆಇ), ಬೆಂಗಳೂರು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ರಾಜ್ಯ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜೂ.16 ರಂದು ಬೆಳಗ್ಗೆ 10 ರಿಂದ ಸಂಜೆ 04 ರವರೆಗೆ ಹೊಸಪೇಟೆ ರಸ್ತೆಯ ಕಂಟೋನ್‍ಮೆಂಟ್‍ನ ಆರ್.ವೈ.ಎಂ.ಇ.ಸಿ. ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಹಾಲ್ ನಲ್ಲಿ ಅಪ್ರೆಂಟಿಸ್‍ಶಿಪ್ ಶಿಶುಕ್ಷು ಕುರಿತ ಒಂದು ದಿನದ ತರಬೇತಿ ಜಾಗೃತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಅದೇ ದಿನದಂದು ಬೆಳಗ್ಗೆ 9.30 ಕ್ಕೆ ನೋಂದಣಿ ಪ್ರಕ್ರಿಯೆ ಇರುತ್ತದೆ. ಈ ಕಾರ್ಯಾಗಾರದಲ್ಲಿ ಎಲ್ಲಾ ಕೈಗಾರಿಕೆಗಳು, ಕೈಗಾರಿಕಾ ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಇತರೆ ವಾಣಿಜ್ಯ ಸಂಘ ಸಂಸ್ಥೆಗಳು, ಆಸ್ಪತ್ರೆಗಳು, ಹೋಟೆಲ್ ಮಾಲೀಕರು ಎಲ್ಲಾರೂ ಭಾಗವಹಿಸಿ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ