ಶನಿವಾರ, ಜೂನ್ 17, 2023

ಅನಾಮಧೇಯ ಮೃತ ಹೆಂಗಸಿನ ಶವ; ವಾರಸುದಾರರ ಪತ್ತೆಗಾಗಿ ಮನವಿ ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ): ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಜಡಿತಾತ ಮಠದ ಆವರಣದಲ್ಲಿ ಸುಮಾರು 75 ರಿಂದ 80 ವರ್ಷದ ಅನಾಮಧೇಯ ಹೆಂಗಸು ಜೂ.15 ರಂದು ಮೃತಪಟ್ಟಿದ್ದು, ಮೃತಳ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಕುರುಗೊಡು ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 4.8 ಅಡಿ, ಕೋಲು ಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯಲ್ಲಿ 8 ಇಂಚು ಉದ್ದ ಬಿಳಿ ಕೂದಲು ಹೊಂದಿರುತ್ತಾಳೆ. ನಶಿ ಮತ್ತು ಗಿಳಿ ಹಸಿರು ಬಣ್ಣದ ಡಿಸೈನ್‍ಯಿರುವ ಸೀರೆ ತೊಟ್ಟಿರುತ್ತಾಳೆ. ಅನಾಮಧೇಯ ಮೃತ ಹೆಂಗಸಿನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಕುರುಗೊಡು ಪೆÇಲೀಸ್ ಠಾಣೆಯ ದೂ.08393-263433, 9480803051 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ