ಶುಕ್ರವಾರ, ಜೂನ್ 2, 2023

ವ್ಯಕ್ತಿ ಕಾಣೆ ಬಳ್ಳಾರಿ,ಜೂ.02(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲೂಕಿನ ಮಣ್ಣೂರು ಗ್ರಾಮದ 1 ನೇ ವಾರ್ಡ್ನ ನಿವಾಸಿ ಬಿ.ಅಂಜನಿ ಎನ್ನುವ 45 ವರ್ಷದ ವ್ಯಕ್ತಿಯು ಮೇ 23 ರಂದು ಕಾಣೆಯಾಗಿರುವ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಎತ್ತರ ಅಂದಾಜು 5.6 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಬಿಳಿ ಬಣ್ಣದ ಪಂಚೆ ಧರಿಸಿರುತ್ತಾನೆ ಹಾಗೂ ಕನ್ನಡ ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆಯುಳ್ಳ ಕಾಣೆಯಾದ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೊಲೀಸ್ ಠಾಣೆಯ ದೂ.08396-244426, ಮೊ.9480803056, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ