ಗುರುವಾರ, ಜುಲೈ 6, 2023
ಕುರುಗೋಡು ವ್ಯಾಪ್ತಿಯಲ್ಲಿ ಜು.07 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜು.06(ಕರ್ನಾಟಕ ವಾರ್ತೆ):
ಕುರುಗೋಡು ವಿದ್ಯುತ್ ಉಪಕೇಂದ್ರದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಜುಲೈ 07 ರಂದು ಬೆಳಗ್ಗೆ 10 ರಿಂದ ಸಂಜೆ 06 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗದ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-1 ಫೀಡರ್ ಕುರುಗೋಡು ಮಾರ್ಗದ ಕುರುಗೋಡು ನಗರ. ಎಫ್-2 ಹಾಗೂ ಎಫ್-14 ಗೆಣಿಕೆಹಾಳ್ ಐಪಿ ಫೀಡರ್ ಮಾರ್ಗದ ಹೊಸಗೆಣಿಕೆಹಾಳ್, ಹಳೇ ಗೆಣಿಕೆಹಾಳ್ ಗ್ರಾಮಗಳು. ಎಫ್-3 ಕಲ್ಲುಕಂಭ ಐಪಿ ಫೀಡರ್ ಮಾರ್ಗದ ಲಕ್ಷ್ಮೀಪುರ, ಶ್ರೀನಿವಾಸ ಕ್ಯಾಂಪ್, ಸೋಮಲಾಪುರ, ಯಲ್ಲಾಪುರ ಕ್ರಾಸ್ ಕಲ್ಲುಕಂಭ ಗ್ರಾಮ. ಎಫ್-4 ಹೆಚ್.ವೀರಾಪುರ ಎನ್.ಜೆ.ವೈ ಮಾರ್ಗದ ಹೆಚ್.ವೀರಾಪುರ, ಸೋಮಲಾಪುರ ಕ್ರಾಸ್, ಮಾರುತಿಕ್ಯಾಂಪ್, ಹೊಸ ಯಲ್ಲಾಪುರ, ಹಳೇ ಯಲ್ಲಾಪುರ, ಶ್ರೀನಿವಾಸ್‍ಕ್ಯಾಂಪ್, ಲಕ್ಷ್ಮೀಪುರ, ಕಲ್ಲುಕಂಭ, ಚಿಟಿಗಿನಹಾಳ್ ಗ್ರಾಮಗಳು.
ಎಫ್-5 ಫೀಡರ್‍ನ ಸಿಂಧಿಗೇರಿ ಐ.ಪಿ ಮಾರ್ಗದ ಬೈಲೂರು ಗ್ರಾಮ. ಎಫ್-6 ಫೀಡರ್‍ನ ಪಟ್ಟನಸೆರಗು ಐಪಿ ಮಾರ್ಗದ ಪಟ್ಟಣಸೆರಗು, ಯಲ್ಲಾಪುರ, ಹಳೆ ಯಲ್ಲಾಪುರ, ಗುತ್ತಿಗನೂರು ಗ್ರಾಮಗಳು. ಎಫ್-7 ಫೀಡರ್‍ನ ಬಾದನಹಟ್ಟಿ ಐ.ಪಿ ಮಾರ್ಗದ ಬಾದನಹಟ್ಟಿ, ವದ್ದಟ್ಟಿ, ಯರ್ರಂಗಳಿ, ಸಿಂಧಿಗೇರಿ, ಮಲ್ಲೇಶ್ವರಿ ಕ್ಯಾಂಪ್.
ಎಫ್-8 ಫೀಡರ್‍ನ ಎಲ್.ಐ.ಎಸ್ ಎನ್.ಜೆ.ವೈ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ ಗ್ರಾಮಗಳು.
ಎಫ್-9 ಫೀಡರ್‍ನ ಬಾದನಹಟ್ಟಿ ಎನ್.ಜೆ.ವೈ ಮಾರ್ಗದ ಬಾದನಹಟ್ಟಿ, ವದ್ದಟ್ಟಿ ಕ್ರಾಸ್, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್, ಯರ್ರಂಗಳಿ, ಕೃಷ್ಣನಗರ ಕ್ಯಾಂಪ್.
ಎಫ್-11 ಫೀಡರ್‍ನ ಚಿಟಿಗಿನಹಾಳ್ ಐ.ಪಿ ಮಾರ್ಗದ ಚಿಟಿಗಿನಹಾಳ್, ಸೋಮಲಾಪುರ, ಹೆಚ್.ವೀರಾಪುರ ಗ್ರಾಮಗಳು.
ಎಫ್-12 ಫೀಡರ್‍ನ ಕಲ್ಲುಕಂಭ/ಕೆರೆ ಐ.ಪಿ ಮಾರ್ಗದ ಕಲ್ಲುಕಂಭ, ಶ್ರೀನಿವಾಸ ಕ್ಯಾಂಪ್, ಕೆರೆಕೆರೆ ಗ್ರಾಮ. ಎಫ್-13 ಫೀಡರ್‍ನ ಕ್ಯಾದಿಹಾಳ್ ಐ.ಪಿ ಮಾರ್ಗದ ಕ್ಯಾದಿಗೆಹಾಳ್, ಮುಷ್ಟಗಟ್ಟ ಗ್ರಾಮ. ಎಫ್-15 ಸೋಲಾರ್ ಫೀಡರ್, 110ಕೆ.ವಿ ಪವನ ವಿದ್ಯುತ್, 33/11ಕೆ.ವಿ ಎಮ್ಮಿಗನೂರು ಉಪ-ಕೇಂದ್ರ ಮಾರ್ಗದ ಎಮ್ಮಿಗನೂರು ಉಪ-ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11ಕೆ.ವಿ ಫೀಡರ್‍ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ