ಸೋಮವಾರ, ನವೆಂಬರ್ 27, 2023

ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಡಿ.01ರಂದು

ಬಳ್ಳಾರಿ,ನ.27(ಕರ್ನಾಟಕ ವಾರ್ತೆ): ಪ್ರಸ್ತಕ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವದ ಕಾರ್ಯಕ್ರಮವನ್ನು ಡಿ.01ರಂದು ಬೆಳಿಗ್ಗೆ 10.30ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ಯುವಕ, ಯುವತಿಯರು ನೊಂದಾಯಿಸಿಕೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಅವರು ತಿಳಿಸಿದ್ದಾರೆ. ಆಸಕ್ತ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಯುವಕ, ಯುವತಿ ಸಂಘಗಳು, 15 ರಿಂದ 29 ವರ್ಷದ ವಯೋಮಿತಿಯ ಯುವಕ, ಯುವತಿಯರು, ಶಾಲಾ ಕಾಲೇಜಿನ ಕಲಾವಿದರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ನೋಂದಣಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಯುವಕ ಯುವತಿಯರಿಗಾಗಿ ಜಾನಪದ ನೃತ್ಯ(ತಂಡ), ಜಾನಪದ ನೃತ್ಯ(ವೈಯಕ್ತಿಕ), ಜಾನಪದ ಗೀತೆ(ತಂಡ), ಜಾನಪದ ಗೀತೆ(ವೈಯಕ್ತಿಕ), ಕಥೆ ಬರೆಯುವುದು (ವೈಯಕ್ತಿಕ) ಸ್ಟೋರಿ ರೈಟಿಂಗ್(1000 ಪದಗಳಿಗೆ ಮೀರದಂತೆ), ಪೋಸ್ಟರ ಮೇಕಿಂಗ್ (ವೈಯಕ್ತಿಕ) (ಬಿತ್ತಿ ಪತ್ರ ತಯಾರಿಕೆ) ಪೋಸ್ಟರ್ ಎ3 ಸೈಜ್ 11.7*16.5, Declamation (ಘೋಷಣೆ) ಕನ್ನಡ, ಆಂಗ್ಲ ಹಾಗೂ ಹಿಂದಿ ಒಳಗೊಂಡಿರಬೇಕು. ಛಾಯಾಚಿತ್ರಣ (ವೈಯಕ್ತಿಕ) ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. *ಸ್ಪರ್ಧಾತ್ಮಕವಲ್ಲದ ವಿಭಾಗ:* ಯುವಜನೋತ್ಸವ ಕಾರ್ಯಕ್ರಮದಲ್ಲಿ ಸ್ಫರ್ಧಾತ್ಮಕವಲ್ಲದ ವಿಭಾಗಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯೋಜನೆ ಮಾಡುವುದು ಮತ್ತು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸುವುದು. ರಾಜ್ಯ ಮಟ್ಟದಲ್ಲಿ ವಿಜೇತ ವಿಭಾಗದವರು ಕೆಳಕಾಣಿಸಿಸದ ಥೀಮ್‍ಗಳನ್ನು Draw of Lots ಮೂಲಕ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಲಾಗುತ್ತದೆ. ಸ್ಪರ್ಧಾತ್ಮಕವಲ್ಲದ ವಿಭಾಗಕ್ಕೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಕೂಡಲೇ ಒದಗಿಸಲಾಗುವುದು. ಉದ್ಯಮಶೀಲತೆಯಾದರೂ ಯುವಕರನ್ನು ಸಬಲೀಕರಣಗೊಳಿಸುವುದು. ಡಿಜಿಟಲ್ ಇಂಡಿಯಾ, ಸಮಾಜಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಫಿಟ್ನೆಸ್. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಮೊ.9972552385, 7026401500, 9036335986ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ