ಬುಧವಾರ, ನವೆಂಬರ್ 29, 2023

ಕಾರ್ಮಿಕ ಇಲಾಖೆಯಿಂದ ವಿವಿಧೆಡೆ ದಾಳಿ: 02 ಬಾಲಕಾರ್ಮಿಕ, 01 ಕಿಶೋರ ಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ,ನ.29(ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಕುರುಗೋಡು ಮತ್ತು ಕುಡುತಿನಿ ಪಟ್ಟಣದ ತೇರು ಬೀದಿ, ಬಳ್ಳಾರಿ ರಸ್ತೆ, ಕಂಪ್ಲಿ ಮುಖ್ಯ ರಸ್ತೆ ಹಾಗೂ ಹೊಸಪೇಟೆ ಪ್ರಮುಖ ರಸ್ತೆಯಲ್ಲಿರುವ ಮುಂತಾದ ಸ್ಥಳಗಳಲ್ಲಿರುವ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ, ಔಷಧಿ ಅಂಗಡಿ, ಚಿಕನ್ ಸೆಂಟರ್ ಇತ್ಯಾದಿ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ಮಾಡಿ 02 ಬಾಲಕಾರ್ಮಿಕ ಮಕ್ಕಳು ಮತ್ತು 01 ಕಿಶೋರ ಬಾಲಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ ಅವರು ತಿಳಿಸಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಚೈಲ್ಡ್ ಲೈಲ್ ಸಹಯೋಗದೊಂದಿಗೆ ನಗರದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ರಡಿಯಲ್ಲಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ನಡೆಸಿ, ಅಧಿಕಾರಿಗಳೊಂದಿಗೆ ದಾಳಿ ನಡೆಸಲಾಗಿದೆ. ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಮಕ್ಕಳ ಪೋಷಕರೊಂದಿಗೆ ಸಮಾಲೋಚಿಸಿ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಲು ಸೂಚಿಸಿ, ಶಾಲೆಗೆ ಮರುದಾಖಲಿಸಲಾಗಿದೆ. ಅವರ ವಯಸ್ಸಿನ ದಾಖಲೆಗಳನ್ನು ಪಡೆದು, ಮಾಲೀಕರ ವಿರುದ್ದ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಕಾಯ್ದೆ 1986 ರ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷ ತಹಶೀಲ್ದಾರ ರಾಘವೆಂದ್ರ ರಾವ್ ಅವರು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಸವರಾಜ್, ಕಂದಾಯ ನಿರೀಕ್ಷಕ ಸುರೇಶ್, ಹಿರಿಯ ಆರೋಗ್ಯ ನಿರೀಕ್ಷಕಿ ಶಾರದ ಕೆ.ವಿ., ಕ್ಷೇತ್ರ ಕಾರ್ಯಕರ್ತೆ ಎಸ್.ಸುಧಾ, ಮಕ್ಕಳ ರಕ್ಷಣಾ ಘಟಕ ಇದಾಯತ್, ಕುಡುತಿನಿ ಆಡಳಿತ ಅಧಿಕಾರಿ ಹರಿಪ್ರಸಾದ್ ಮತ್ತು ಚೈಲ್ಡ್ ಲೈನ್ ಸಿಬ್ಬಂದಿಗಳಾದ ಕಾರ್ತಿಕ್, ಅರುಣ್ ಹಾಜರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ