ಸೋಮವಾರ, ನವೆಂಬರ್ 20, 2023

ನ.27ರಂದು ವಿಕಲಚೇತನರ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು

ಬಳ್ಳಾರಿ,ನ.20(ಕರ್ನಾಟಕ ವಾರ್ತೆ): ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿಕಲಚೇತನರಿಗೆ ನ.27ರಂದು ಬೆಳಿಗ್ಗೆ 09 ಗಂಟೆಗೆ ವಿಮ್ಸ್ ಕ್ರೀಡಾಂಗಣದಲ್ಲಿ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಎಂ.ಗೋವಿಂದಪ್ಪ ಅವರು ತಿಳಿಸಿದ್ದಾರೆ. *ಕ್ರೀಡೆ ಸ್ಪರ್ಧೆಗಳ ವಿವರ:* ದೈಹಿಕ ಅಂಗವಿಕಲರಿಗೆ ಗುಂಡು ಎಸೆತ, ಜಾವಲಿನ್ ಥ್ರೋ. ಅಂಧರಿಗೆ ಕೇನ್‍ರೆಸ್, ಗುಂಡು ಎಸೆತ. ಶ್ರವಣದೋಷವುಳ್ಳವರಿಗೆ 100 ಮೀ. ಓಟ, ಗುಂಡು ಎಸೆತ. ಬುದ್ದಿಮಾಂದ್ಯರಿಗೆ ಮ್ಯೂಜಿಕಲ್ ಚೇರ್, ಚೆಂಡು ಎಸೆತ. ವಯಸ್ಕರಿಗೆ ಕ್ರಿಕೆಟ್, ಕಬ್ಬಡ್ಡಿ, ಕೋಕೋ. *ಸಾಂಸ್ಕøತಿಕ ಸ್ಪರ್ಧೆಗಳ ವಿವರ:* ಶ್ರವಣದೋಷವುಳ್ಳ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ. ದೈಹಿಕ ಅಂಗವಿಕಲರಿಗೆ ಜಾನಪದ ಗೀತೆ, ಭಾವಗೀತೆ. ಬುದ್ದಿಮಾಂದ್ಯ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ (ವೇಷ ಭೂಷಣ). ದೃಷ್ಠಿದೋಷವುಳ್ಳವರಿಗೆ ಜಾನಪದ ಗೀತೆ, ಭಾವಗೀತೆ. ಜಿಲ್ಲೆಯ ವಿಕಲಚೇತನರು ಈ ಮೇಲ್ಕಂಡ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಎಂ.ಗೋವಿಂದಪ್ಪ ಅವರ ಮೊ.9008485380, ಯೋಜನ ಸಹಾಯಕ ಚಿದಾನಂದ.ಜಿ ಅವರ ಮೊ.9972813152, ಹಾಗೂ ಬಳ್ಳಾರಿ ಎಂಆರ್‍ಡಬ್ಲ್ಯೂ ರಾಣಿ ಮೊ.8880875620, ಸಿರುಗುಪ್ಪ ಎಂಆರ್‍ಡಬ್ಲ್ಯೂ ಸಾಬೇಶ್ ಮೊ.9743509698 ಸಂಡೂರು ಎಂಆರ್‍ಡಬ್ಲ್ಯೂ ಕರಿಬಸಜ್ಜ ಮೊ.9632052270 ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂ.08392267886 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ