ಸೋಮವಾರ, ನವೆಂಬರ್ 27, 2023

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಬಳ್ಳಾರಿ,ನ.24(ಕರ್ನಾಟಕ ವಾರ್ತೆ): ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು, ನ.28 ಮತ್ತು 29ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನ.28ರಂದು ಮಧ್ಯಾಹ್ನ 3.05 ಕ್ಕೆ ಬೆಂಗಳೂರಿನಿಂದ ವಾಯುಮಾರ್ಗದ ಮೂಲಕ 4.10ಕ್ಕೆ ತೋರಣಗಲ್ಲಿಗೆ ಆಗಮಿಸುವರು. ಅಲ್ಲಿಂದ 4.15ಕ್ಕೆ ಹೊರಟು, 4.40ಕ್ಕೆ ಸಂಡೂರು ತಾಲ್ಲೂಕಿನ ಕೋಡಾಲು ಮತ್ತು ರಾಜಾಪುರ ಗ್ರಾಮ ವ್ಯಾಪ್ತಿಯ ಹತ್ತಿ, ನವಣೆ ಮತ್ತು ಸಜ್ಜೆ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ವೀಕ್ಷಣೆ ನಡೆಸುವರು. ಸಂಜೆ 6ಕ್ಕೆ ತೋರಣಗಲ್ಲಿನ ಜಿಂದಾಲ್ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ನ.29ರಂದು ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ಬಳ್ಳಾರಿ ತಾಲ್ಲೂಕು ವ್ಯಾಪ್ತಿಯ ಬೆಳಗಲ್ಲು ಮತ್ತು ಹಲಕುಂದಿ ಗ್ರಾಮ ವ್ಯಾಪ್ತಿಯ ತೊಗರಿ ಮತ್ತು ಸಜ್ಜೆ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ವೀಕ್ಷಣೆ ಮಾಡುವರು. ನಂತರ ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲೆಯ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಬಳಿಕ 01 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 01.30ಕ್ಕೆ ಪಕ್ಷದ ಕಚೇರಿಗೆ ಭೇಟಿ ಹಾಗೂ ಕಾರ್ಯಕರ್ತರ ಅಹವಾಲು ಆಲಿಸುವರು. ನಂತರ ಮಧ್ಯಾಹ್ನ 2.30 ಕ್ಕೆ ಬಳ್ಳಾರಿಯಿಂದ ನಿರ್ಗಮಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ