ಶನಿವಾರ, ನವೆಂಬರ್ 11, 2023
ಬಾಲಕ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ನ.11(ಕರ್ನಾಟಕ ವಾರ್ತೆ) :
ನಗರದ 7ನೇ ವಾರ್ಡ್ ಸರ್ಕಾರಿ ಹೆರಿಗೆ ಅಸ್ಪತ್ರೆ ಹತ್ತಿರ ಕುರಿ ಕಮೇಲಾದ ಲಕ್ಷ್ಮಿನಾರಾಯಣ ಎನ್ನುವ 15 ವರ್ಷದ ಬಾಲಕ ನ.08 ರಂದು ಕಾಣೆಯಾಗಿರುವ ಕುರಿತು ಎಪಿಎಂಸಿ ಯಾರ್ಡ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕನ ಚಹರೆ ಗುರುತು: ಎತ್ತರ 5.5 ಅಡಿ, ಬೆಳ್ಳನೆ ಮೈಬಣ್ಣ, ತೆಳುವಾದ ಮೈಕಟ್ಟು, ಕೋಲುಮುಖ, ತಲೆಯಲ್ಲಿ ಗುಂಗುರ ಕೂದಲು, ಚಿಗುರು ಗಡ್ಡ, ಚಿಗುರು ಮೀಸೆ ಇರುತ್ತವೆ. ಬಲಗೈ ಮೇಲೆ ಅಮ್ಮ ಅಂತ ಅಚ್ಚೆ ಗುರುತು ಇರುತ್ತದೆ.
ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಟಿ-ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಮೇಲ್ಕಂಡ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಎಪಿಎಂಸಿ ಯಾರ್ಡ್ ಪೆÇಲೀಸ್ ಠಾಣೆಯ ದೂ.08392-250033, ಮೊ.9480803096 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ