ಬುಧವಾರ, ನವೆಂಬರ್ 15, 2023

ಅಪರಿಚಿತ ಮೃತ ವ್ಯಕ್ತಿಯ ಶವ ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ನ.15(ಕರ್ನಾಟಕ ವಾರ್ತೆ): ನಗರದ ರೂಪನಗುಡಿ ರಸ್ತೆಯ ತಿರುಮಲ ನಗರ ಕ್ಯಾಂಪ್ ಹತ್ತಿರ ಇರುವ ಅಸುಂಡಿ ಹೆಚ್.ಎಲ್.ಸಿ ಡಿ.ಪಿ ನಂ.15 ವಿತರಣಾ ಕಾಲುವೆಯಲ್ಲಿ ಬ್ರಿಡ್ಜ್ ಹತ್ತಿರ ಸುಮಾರು 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯ ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ಚಹರೆ ಗುರುತು: ಎತ್ತರ ಸುಮಾರು 5.5 ಅಡಿ, ದುಂಡುಮುಖ, ಗೋಧಿ ಮೈಬಣ್ಣ, ದೃಢ ಮೈಕಟ್ಟು ಹೊಂದಿದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ದೂ.08392-276461, ಪಿ.ಐ ಮೊ.9480803049 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258102 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ