ಶುಕ್ರವಾರ, ನವೆಂಬರ್ 24, 2023

ವಿದ್ಯುತ್ ವ್ಯತ್ಯಯ ನ.27ರಂದು

ಬಳ್ಳಾರಿ,ನ.24(ಕರ್ನಾಟಕ ವಾರ್ತೆ): ನಗರ ಜೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಗೆ ಬರುವ 110/11ಕೆ.ವಿ ಸೌತ್ ವಿದ್ಯುತ್ ವಿತರಣ ಕೇಂದ್ರ ದಿಂದ ವಿದ್ಯಾತ್ ಸರಬರಾಜು ಆಗುವ ಎಫ್-23, ಎಫ್-24, ಎಫ್-25, ಎಫ್-46, ಎಫ್-47 ಮತ್ತು ಎಫ್-48 ಫೀಡರ್‍ಗಳ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.27ರಂದು ಬೆಳಿಗ್ಗೆ 11ರಿಂದ ಸಂಜೆ 04ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:* ಬೆಂಗಳೂರು ರಸ್ತೆ, ಅಂದ್ರಾಳ್ ರಸ್ತೆ, ಕೊಲ್ಮಿ ಚೌಕ್, ಕಾರ್ಕಲ ತೋಟ, ಬಾಪೂಜಿ ನಗರ, ಮಿಲ್ಲರ್ ಪೇಟೆ, ಮೋತಿ ವೃತ್ತ, ತೇರು ಬೀದಿ, ಇಂಡಸ್ಟ್ರಿಯಲ್‍ಏರಿಯಾ ಹಂತ-1, ಮಹೇಶ್ ಪೈಪ್ಸ್, ಲಾರಿಟರ್ಮಿನಲ್, ಜೈನ್ ಮಾರ್ಕೆಟ್, ಸಾಯಿ ಕಾಲೋನಿ, ಎಪಿಎಮ್‍ಸಿ, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ಮಾರ್ಕೆಟ್, ತೋಪಿಗಲ್ಲಿ, ಬೊಮ್ಮನಾಳ್ ರೋಡ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ