ಬುಧವಾರ, ನವೆಂಬರ್ 22, 2023
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ; ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ,ನ.22(ಕರ್ನಾಟಕ ವಾರ್ತೆ):
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ನೆರವು ರಕ್ಷಣಾ ಸಲಹೆಗಾರ (LADC) ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ತಿಳಿಸಿದ್ದಾರೆ.
ಕಚೇರಿ ಆಡಳಿತ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಹಾಗೂ ಜವಾನ ಹುದ್ದೆಗಳಿಗೆ ತಲಾ ಒಂದರಂತೆ ಹುದ್ದೆಗಳಿವೆ. ಮಾಹೆಯಾನ, ಕಚೇರಿ ಆಡಳಿತ ಸಹಾಯಕರಿಗೆ ರೂ.19,000, ಡೆಟಾ ಎಂಟ್ರಿ ಅಪರೇಟರ್ ಅವರಿಗೆ ರೂ,17,271 ಹಾಗೂ ಜವಾನ ಹುದ್ದೆಗೆ ರೂ.15202 ಸಂಚಿತ ಸಂಭಾವನೆ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ.
*ಕಚೇರಿ ಆಡಳಿತ ಸಹಾಯಕ (ಆಫೀಸ್ ಅಸಿಸ್ಟೆಂಟ್/ ಕ್ಲರ್ಕ್) ಹುದ್ದೆಗೆ ವಿದ್ಯಾರ್ಹತೆ:*
ಯಾವುದೇ ಪದವಿ, ಮೂಲ ಪದ ಸಂಸ್ಕರಣಾ ಕೌಶಲ್ಯಗಳು ಮತ್ತು ಕಂಪ್ಯೂಟರ್‍ಅನ್ನು ನಿರ್ವಹಿಸುವ ಸಾಮಥ್ರ್ಯ ಮತ್ತು ಡೇಟಾವನ್ನು ಪೆÇೀಷಿಸುವ ಕೌಶಲ್ಯ, ಉತ್ತಮ ಟೈಪಿಂಗ್ ವೇಗ, ಫೈಲ್‍ಗಳನ್ನು ಸಿದ್ಧಪಡಿಸುವ ಸಾಮಥ್ರ್ಯ, ಫೈಲ್ ನಿರ್ವಹಣೆ ಮತ್ತು ಪ್ರಕ್ರಿಯೆ ಜ್ಞಾನ ಹೊಂದಿರಬೇಕು.
*ರಿಸೆಪ್ಷನಿಸ್ಟ್/ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ವಿದ್ಯಾರ್ಹತೆ:*
ಯಾವುದೇ ಪದವಿ, ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ, ಪದ ಮತ್ತು ಡೇಟಾ ಸಂಸ್ಕರಣಾ ಸಾಮಥ್ರ್ಯ, ಟೆಲಿ ಸಂವಹನ ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಸಾಮಥ್ರ್ಯ (ದೂರವಾಣಿ, ಫ್ಯಾಕ್ಸ್‍ಯಂತ್ರ, ಸ್ವಿಚ್‍ಬೋರ್ಡ್ ಇತ್ಯಾದಿ), ಉತ್ತಮ ಟೈಪಿಂಗ್ ವೇಗದೊಂದಿಗೆ ಪ್ರಾವೀಣ್ಯತೆ ಹೊಂದಿರಬೇಕು.
ಜವಾನ ಹುದ್ದೆಗೆ ವಿದ್ಯಾರ್ಹತೆಯು ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು.
ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಇತ್ತೀಚಿನ 3 ಪಾಸ್ ಪೆÇೀಟೋಗಳನ್ನು ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಡಿ.04 ಕೊನೆಯ ದಿನವಾಗಿರುತ್ತದೆ.
ಮೇಲ್ಕಂಡ ಹುದ್ದೆಗಳ ನೇಮಕಾತಿಯು ತಾತ್ಕಾಲಿಕವಾಗಿದ್ದು, ಪ್ರಾಧಿಕಾರವು ನೇಮಕಾತಿಯನ್ನು ಯಾವುದೇ ನೋಟಿಸ್ ನೀಡದೇ ರದ್ದುಗೊಳಿಸುವ ಅಧಿಕಾರ ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಹಾಗೂ ದೂ.08392-278077ಗೆ ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ