ಸೋಮವಾರ, ನವೆಂಬರ್ 27, 2023
ಕ್ಷೀರ ಕ್ರಾಂತಿಯಲ್ಲಿ ಡಾ.ವರ್ಗೀಸ್ ಕುರಿಯನ್ ಅವರ ಕೊಡುಗೆ ಅಪಾರ: ಎಸ್.ವೆಂಕಟೇಶ ಗೌಡ
ಬಳ್ಳಾರಿ,ನ.27(ಕರ್ನಾಟಕ ವಾರ್ತೆ):
ಹಾಲು ಉತ್ಪಾದನೆಯಲ್ಲಿಯೇ ಪ್ರಪಂಚದಲ್ಲಿ ಭಾರತ ದೇಶವು 2ನೇ ಸ್ಥಾನದಲ್ಲಿರಲು ಡಾ.ವರ್ಗೀಸ್ ಕುರಿಯನ್‌ರೇ ಕಾರಣ, ಇವರನ್ನು ಕ್ಷೀರ ಕ್ರಾಂತಿಯ ಪಿತಾಮಹ ಎಂದೇ ಕರೆಯುತ್ತಾರೆ. ಕ್ಷೀರ ಕ್ರಾಂತಿಯಲ್ಲಿ ಇವರು ಸಲ್ಲಿಸಿರುವ ಸೇವೆ ಮತ್ತು ಕೊಡುಗೆ ಅಪಾರವಾಗಿದೆ ಎಂದು ರಾಬಕೋವಿ ಹಾಲು ಒಕ್ಕೂಟ ನಿಗಮದ ಪ್ರಭಾರ ವ್ಯವಸ್ಥಾಪಕ(ಮಾರುಕಟ್ಟೆ) ಎಸ್.ವೆಂಕಟೇಶ ಗೌಡ ಅವರು ಹೇಳಿದರು.
ಸೋಮವಾರದಂದು ನಗರದ ಶ್ರೀನಂದ ವಸತಿ ಶಾಲೆಯಲ್ಲಿ ಕ್ಷೀರ ಕ್ರಾಂತಿಯ ಪಿತಾಮಹರಾದ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೂಲ್ ಡೇರಿಯ ಸ್ಥಾಪಕರು ಮತ್ತು ಭಾರತದಲ್ಲಿ ಅಪರೇಷನ್ ಫ್ಲಡ್ (ಕ್ಷೀರ ಕ್ರಾಂತಿ) ಎಂಬ ಜಗತ್ತಿನ ಅತಿ ದೊಡ್ಡ ಡೇರಿ ಯೋಜನೆಯನ್ನು ಪ್ರಾರಂಭಿಸಿ, ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕರ ದೇಶವನ್ನಾಗಿ ಮಾಡಲು ಡಾ.ವರ್ಗೀಸ್ ಕುರಿಯನ್ ಅವರೇ ಪ್ರಮುಖರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ತಿಳಿಸಿದರು.
ಶ್ರೀನಂದ ವಸತಿ ಶಾಲೆಯ ಸಂಸ್ಥಾಪಕರಾದ ವಿ.ಗಾಂದಿ ಅವರು ಮಾತನಾಡಿ, ದೈನಂದಿನ ಜೀವನದಲ್ಲಿ ಕಲಬೆರಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಬೇಕೆಂದರೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉಪಯೋಗಿಸಿ ಆರೋಗ್ಯವಾಗಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾರುಕಟ್ಟೆ ಗುತ್ತಿಗೆ ಸಮಾಲೋಚಕ ಮಂಜುನಾಥ, ಪಾರ್ವತಿ, ಲಕ್ಷಿö್ಮÃಕಾಂತ್ ಒಕ್ಕೂಟದ ಸಿಬ್ಬಂದಿಗಳಾದ ಸಹಾಯಕ ವ್ಯವಸ್ಥಾಪಕಿ(ಮಾರುಕಟ್ಟೆ) ಕೆ.ಆರ್.ಇಂದುಕಲಾ, ಸಹಾಯಕ ವ್ಯವಸ್ಥಾಪಕಿ ಜ್ಯೋತಿ, ಕೆಮಿಸ್ಟ್ ಸರೋಜ, ಲೋಹಿತ್ ಕುಮಾರ್, ಸಿ.ಎನ್.ಮಂಜುನಾಥ, ಬಾಬು.ಬಿ ಸೇರಿದಂತೆ ಹಾಗೂ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಂದಿನಿ ಬಾದಾಮಿ ಹಾಲನ್ನು ವಿತರಿಸಲಾಯಿತು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ