ಶುಕ್ರವಾರ, ನವೆಂಬರ್ 24, 2023

ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ನ.27 ರಂದು

ಬಳ್ಳಾರಿ,ನ.24(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿನ 220 ಕೆ.ವಿ ಅಲ್ಲೀಪುರ-ಸ್ವೀಕರಣಾ ಕೇಂದ್ರದಲ್ಲಿ 220 ಕೆ.ವಿ ಮಾರ್ಗದ ಉಪಕರಣಗಳನ್ನು ಪರೀಕ್ಷಿಸುವ ಕಾಮಗಾರಿ ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ, 220ಕೆ.ವಿ. ಅಲ್ಲಿಪುರ ಸ್ವೀಕರಣ ಕೇಂದ್ರದಿಂದ ಸಂಪರ್ಕ ಹೊಂದಿರುವ 110/33/11ಕೆ.ವಿ ಉಪ-ಕೆಂದ್ರಗಳು ಮತ್ತು ಉಪ-ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ 33/11ಕೆ.ವಿ ಮಾರ್ಗಗಳಲ್ಲಿ ನ.27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* 110/11 ಕೆ.ವಿ ವಿದ್ಯುತ್ ಉಪಕೇಂದ್ರಗಳಾದ ದಕ್ಷಿಣ, ಉತ್ತರ, ಹಲಕುಂದಿ, ಮೀನಹಳ್ಳಿ, ಬಿಸಿಲಹಳ್ಳಿ, ಮೋಕ, ಶ್ರೀಧರಗಡ್ಡೆ ಮತ್ತು ಕುರುಗೋಡು. 33/11ಕೆ.ವಿ ವಿದ್ಯುತ್ ಉಪಕೇಂದ್ರಗಳಿಂದ ಗುಡದೂರು, ಎಮ್ಮಿಗನೂರು, ರೂಪನಗುಡಿ, ಯರ್ರಗುಡಿ ಹಾಗೂ 220/11 ಕೆ.ವಿ.ಯ ಅಲ್ಲಿಪುರ ಸ್ವೀಕರಣಾ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ