ಗುರುವಾರ, ನವೆಂಬರ್ 16, 2023

ಆಧಾರ್ ಜೋಡಣೆ ಕಡ್ಡಾಯ

ಬಳ್ಳಾರಿ,ನ.16(ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ವೃದ್ಯಾಪ್ಯ ವೇತನ, ಸಂದ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ಸಿನಿ ಮತ್ತು ಮೈತ್ರಿ ಯೋಜನೆಗಳನ್ನು ಪಡೆಯುತ್ತಿರುವ ಬಳ್ಳಾರಿ ತಾಲೂಕು ಹಾಗೂ ಗ್ರಾಮಾಂತರ ವ್ಯಾಪ್ತಿಯ ಅರ್ಹ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಮತ್ತು ಅಂಚೆ ಖಾತೆಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಬೇಕು ಎಂದು ತಹಶೀಲ್ದಾರ ಗುರುರಾಜ ಅವರು ತಿಳಿಸಿದ್ದಾರೆ. ಒಂದು ವೇಳೆ ಫಲಾನುಭವಿಗಳು ಆಧಾರ್ ಜೋಡಣೆಯನ್ನು ಮಾಡಿಸದಿದ್ದಲ್ಲಿ ಸರ್ಕಾರದಿಂದ ಪಾವತಿಸುವ ವೇತನವು ನವೆಂಬರ್‍ನಿಂದ ಸ್ಥಗಿತಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ