ಮಂಗಳವಾರ, ನವೆಂಬರ್ 28, 2023
ಅಪರಿಚಿತ ಮೃತ ವ್ಯಕ್ತಿ; ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ನ.28(ಕರ್ನಾಟಕ ವಾರ್ತೆ):
ನಗರದ ಇನ್‍ಫ್ಯಾಂಟರಿ ರಸ್ತೆಯಲ್ಲಿ ಕುಬೇರ ಬಾರ್ ಎದುರುಗಡೆ ಇರುವ ಷಣ್ಮುಖ ಗ್ರಾನೈಟ್ ಕಾಂಪೌಂಡ್ ಪಕ್ಕದಲ್ಲಿ ಸುಮಾರು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿಯು ನ.23 ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಚಹರೆ ಗುರುತು: ಎತ್ತರ ಸುಮಾರು 5.6 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಕಪ್ಪು ಮತ್ತು ಬಿಳಿ ಕೂದಲು, ಕುರುಚಲು ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ.
ಮೃತನ ಮೈ ಮೇಲಿನ ಬಟ್ಟೆಗಳು: ಗುಲಾಬಿ ಬಣ್ಣದ ಡಿಜೈನ್‍ನ ತುಂಬು ತೋಳಿನ ಅಂಗಿ, ಕಂದು ಬಣ್ಣದ ಬನಿಯನ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೆÇಲೀಸ್ ಠಾಣೆಯ ದೂ.08392-240731, ಪಿ.ಐ ಮೊ.9480803047, ಪಿಎಸ್‍ಐ ಮೊ.9480803084 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದು ಎಂದು ಕೌಲ್‍ಬಜಾರ್ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ