ಮಂಗಳವಾರ, ನವೆಂಬರ್ 21, 2023
ಅಪರಿಚಿತ ಮೃತನ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ನ.21(ಕರ್ನಾಟಕ ವಾರ್ತೆ):
ತಾಲ್ಲೂಕಿನ ವಿನಾಯಕ ನಗರದ ಹತ್ತಿರ ಇರುವ ಹೆಚ್.ಎಲ್.ಸಿ ಕಾಲುವೆಯಲ್ಲಿ ಹೊಸಪೇಟೆ ರಸ್ತೆಯ ಬ್ರಿಡ್ಜ್ ಹತ್ತಿರ ವಾಟರ್‌ಹೌಸ್ ಪೈಪ್‌ಲೈನ್ ಹತ್ತಿರ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯು ನ.20 ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ಪತ್ತೆಗಾಗಿ ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ.
ಚಹರೆ ಗುರುತು: ಎತ್ತರ ಸುಮಾರು 5.6 ಅಡಿ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿರುತ್ತಾನೆ. ಬಿಳಿ ಬಣ್ಣದ ಟಿ-ಶರ್ಟ್, ಮೆರೂನ್ ರೆಡ್ ಬಣ್ಣದ ಆಫ್ ಬರ್ಮೋಡ ಧರಿಸಿರುತ್ತಾನೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಪಿ.ಐ ಮೊ.9480803049 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ. 08392-258100ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ