ಮಂಗಳವಾರ, ಮಾರ್ಚ್ 12, 2024
ಮಾ.13 ರಂದು ಪ್ರಧಾನಮಂತ್ರಿ ಸುರಜ್ ಕಾರ್ಯಕ್ರಮ
ಬಳ್ಳಾರಿ,ಮಾ.12(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಹಣಕಾಸು ಸೇವಾ ಇಲಾಖೆ ಮತ್ತು ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿ, ಕರ್ನಾಟಕ ಇವರ ಆದೇಶದಂತೆ ಕೆನರಾ ಬ್ಯಾಂಕ್ ಜಿಲ್ಲಾ ಪ್ರಧಾನ ಕಚೇರಿ ವತಿಯಿಂದ ಮಾ.13 ರಂದು ಮಧ್ಯಾಹ್ನ 01 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಪ್ರಧಾನಮಂತ್ರಿ ಸುರಜ್ ಕಾರ್ಯಕ್ರಮವನ್ನು ನಗರದ ಜಿಪಂ ನಜೀರ್‍ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಿಗಮಗಳ ಯೋಜನೆಯ (ಪರಿಶಿಷ್ಟ ಜಾತಿಗಳು, ಸಫಾಯಿ ಕರ್ಮಚಾರಿಗಳು ಮತ್ತು ಹಿಂದುಳಿದ ವರ್ಗಗಳ) ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಡೀಯೋ ಸಂವಾದ ನಡೆಸುವರು ಎಂದು ಎಲ್‍ಡಿಸಿಎಂ ಸೋಮನಗೌಡ ಐನಾಪುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ