ಸೋಮವಾರ, ಮಾರ್ಚ್ 11, 2024
ಮಾ.27ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
ಬಳ್ಳಾರಿ,ಮಾ.11(ಕರ್ನಾಟಕ ವಾರ್ತೆ):
ಕಾರ್ಮಿಕರ ಭವಿಷ್ಯ ಸಂಸ್ಥೆ ಬಳ್ಳಾರಿ ಪ್ರಾದೇಶಿಕ ನಿಧಿ ವತಿಯಿಂದ ನಿಧಿ ಆಪ್ಕೆ ನಿಕಟ್: ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ ಎಂಬ ಕಾರ್ಯಕ್ರಮವನ್ನು ಮಾ.27 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಲ್ಲಿಪುರದ ಭಾರತೀಯ ನಿಗಮ ಎಫ್.ಸಿ.ಐ ನÀಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಕೆ.ವೆಂಕಟ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಕಾರ್ಮಿಕರ, ಪಿಂಚಣಿದಾರರ, ಮತ್ತು ಉದ್ಯೋಗದಾತರರ ಕುಂದು ಕೊರತೆ ಪರಿಹಾರ, ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಉದ್ಯೋಗದಾತರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಅರಿವು, ಕಾರ್ಮಿಕರಿಗೆ, ಉದ್ಯೋಗದಾತರಿಗೆ, ಪ್ರಧಾನ ಉದ್ಯೋಗದಾತರಿಗೆ ಮತ್ತು ಗುತ್ತಿಗೆದಾರರಿಗೆ ಲಭ್ಯವಿರುವ ಆನ್‍ಲೈನ್ ಸೇವೆಗಳ ಮಾಹಿತಿ, ಹೊಸ ಉಪಕ್ರಮಗಳು ಹಾಗೂ ಸುಧಾರಣೆ ಕ್ರಮಗಳ ಮಾಹಿತಿ ಒದಗಿಸುವುದಾಗಿದೆ.
ಕಾರ್ಮಿಕರು, ಪಿಂಚಣಿದಾರರು, ಉದ್ಯೋಗದಾತರು ಮಾ.27 ರಂದು ನಡೆಯುವ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ