ಸೋಮವಾರ, ಮಾರ್ಚ್ 4, 2024
ಕನಿಷ್ಠ ಬೆಂಬಲ ಬೆಲೆ ಯೋಜನೆ: ರೈತರ ಖರೀದಿ ಕೇಂದ್ರಗಳು ಮಾರ್ಪಾಡು
ಬಳ್ಳಾರಿ,ಮಾ.04(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ 2023-24ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ ತೆರೆಯಲಾಗಿದ್ದ ರೈತರ ಖರೀದಿ ಕೇಂದ್ರಗಳನ್ನು ಸಾಗಾಣಿಕೆ ಹಾಗೂ ಹಮಾಲಿಗಳ ಹಿತದೃಷ್ಟಿಯಿಂದ ಮಾರ್ಪಾಡು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಪ್ರಸ್ತುತ ಬದಲಾದ ಖರೀದಿ ಕೇಂದ್ರದ ವಿವರ:*
ಬಳ್ಳಾರಿ ತಾಲ್ಲೂಕಿನ ಈ ಹಿಂದೆ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿದ್ದ ಖರೀದಿ ಕೇಂದ್ರವನ್ನು ಕರ್ನಾಟಕ ರಾಜ್ಯ ಉಗ್ರಾಣ ಘಟಕ - 1 ಮತ್ತು 2 ರ ನಿಗಮದಲ್ಲಿ ತೆರೆಯಲಾಗಿದೆ. ಅದೇರೀತಿಯಾಗಿ ಸಿರುಗುಪ್ಪ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಖರೀದಿ ಕೇಂದ್ರವು ತಾಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಕಂಪ್ಲಿ ತಾಲೂಕಿನ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿದ್ದ ಖರೀದಿ ಕೇಂದ್ರವು ತಾಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ತೆರೆಯಲಾಗಿದೆ.
ಉಳಿದಂತೆ ಕುರುಗೋಡು ಮತ್ತು ಸಂಡೂರು ಪಟ್ಟಣಗಳಲ್ಲಿ ಎಪಿಎಂಸಿ ಯಾರ್ಡ್‍ನಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ