ಮಂಗಳವಾರ, ಮಾರ್ಚ್ 12, 2024
“ಒಂದು ನಿಲ್ದಾಣ, ಒಂದು ಉತ್ಪನ್ನ” ಮಳಿಗೆ ಉದ್ಘಾಟನೆ ಮಾಡಿದ ಸಂಸದ ವೈ.ದೇವೇಂದ್ರಪ್ಪ
ಬಳ್ಳಾರಿ,ಮಾ.12(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಯಡಿಯ ಸಂಡೂರು ಕರಕುಶಲ ಕೇಂದ್ರದ ಲಂಬಾಣಿ ಕಸೂತಿ ಕಲೆಯ ಉತ್ಪನ್ನಗಳ ಮಾರಾಟ ನೂತನ ಮಳಿಗೆಯನ್ನು ಸಂಸದ ವೈ.ದೇವೇಂದ್ರಪ್ಪ ಅವರು ಮಂಗಳವಾರ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಬಿ.ಶ್ವೇತಾ, ಉಪ ಮೇಯರ್ ಬಿ.ಜಾನಕಿ, ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಆಂಜನೇಯಲು, ವಿಭಾಗೀಯ ವೈದ್ಯಕೀಯ ಅಧಿಕಾರಿ ಸುಶ್ಮಿತಾ ಜಗನ್ ಮೋಹನ್ ರೆಡ್ಡಿ, ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಮಹಾರುದ್ರ ಗೌಡ, ಚೇಂಬರ್ ಆಫ್ ಕಾಮರ್ಸ್‍ನ ಸದಸ್ಯ ರಾಮಚಂದ್ರಯ್ಯ, ಬಳ್ಳಾರಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ನಾಗೇಶ್ ಬಾಬು ಶರ್ಮಾ, ಮುಖ್ಯ ವಾಣಿಜ್ಯ ನಿರೀಕ್ಷಕ ಎಸ್. ಹೊನ್ನೂರಸ್ವಾಮಿ ಸೇರಿದಂತೆ, ಮಹಾನಗರ ಪಾಲಿಕೆಯ ಸದಸ್ಯರು, ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ