ಗುರುವಾರ, ಏಪ್ರಿಲ್ 25, 2024

ಬಳ್ಳಾರಿಯಲ್ಲಿ ಏ.26 ರಂದು ಖಾಸಗಿ ಕಾರ್ಯಕ್ರಮ; ಭಾರಿ ಸರಕು ವಾಹನಗಳ ಸಂಚಾರ ನಿರ್ಬಂಧ

ಬಳ್ಳಾರಿ,ಏ.25(ಕರ್ನಾಟಕ ವಾರ್ತೆ): ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಏ.26 ರಂದು ಪಕ್ಷದ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರ ಸುರಕ್ಷತೆ, ಅತೀ ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಸುಗಮ ಸಂಚಾರ ವ್ಯವಸ್ತೆಯನ್ನು ಕಲ್ಪಿಸುವ ಹಿತದೃಷ್ಟಿಯಿಂದ ಮೋಟರ್ ವಾಹನ ಕಾಯ್ದೆ 1988 ಕಲಂ 115 ರಡಿಯಲ್ಲಿ ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮ 1989 ನಿಯಮ 221ಎ(5) ರನ್ವಯ ಪ್ರದತ್ತವಾದ ಅಧಿಕಾರಿ ಚಲಾಯಿಸಿ ಏ.26 ರಂದು ಮಧ್ಯಾಹ್ನ 03 ಗಂಟೆಯಿಂದ ರಾತ್ರಿ 09 ಗಂಟೆಯವರೆಗೆ ಬಳ್ಳಾರಿ ನಗರದಲ್ಲಿ ಹೊಸಪೇಟೆಯಿಂದ ಸಿರುಗುಪ್ಪ ಕಡೆಗೆ ಹೋಗುವ ಹಾಗೂ ಸಿರುಗುಪ್ಪದಿಂದ ಹೊಸಪೇಟೆ ಮತ್ತು ಬೆಂಗಳೂರು ರಸ್ತೆ ಕಡೆಗೆ ಚಲಿಸುವ ಭಾರೀ ಸರಕು ಸಾಗಣಿಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ