ಶುಕ್ರವಾರ, ಏಪ್ರಿಲ್ 26, 2024

ಅನಾಮಧೇಯ ಮೃತ ವಾರಸುದಾರರ ಪತ್ತೆಗಾಗಿ

ಬಳ್ಳಾರಿ,ಏ.26(ಕರ್ನಾಟಕ ವಾರ್ತೆ): ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿನ ವಾಟರ್ ಕೂಲರ್ ಹತ್ತಿರದ ವೇದಿಕೆ ನಂ.01 ರಲ್ಲಿ ರೈಲ್ವೇ ಕಿ.ಮೀ ನಂ.143/300-400 ರಲ್ಲಿ ಏ.25 ರಂದು ಸುಮಾರು 70 ವರ್ಷದ ವೃದ್ಧನು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಉಪ-ನಿರೀಕ್ಷಕರು ತಿಳಿಸಿದ್ದಾರೆ. ಚಹರೆ ಗುರುತು: ಸುಮಾರು 5.4 ಅಡಿ ಎತ್ತರ, ಚೌಕ ಮುಖ, ಬಡಕಲು ದೇಹ, ಗೋಧಿ ಮೈಬಣ್ಣ, ಉದ್ದ ಮೂಗು, ತಲೆಯಲ್ಲಿ ಸುಮಾರು 01 ಇಂಚು ಕಪ್ಪು ಮತ್ತು ಬಿಳಿ ಮಿಶ್ರೀತ ಕೂದಲು ಮತ್ತು ಕಪ್ಪು, ಬಿಳಿ ಮೀಸೆ ಮತ್ತು ಗಡ್ಡ ಹೊಂದಿರುತ್ತಾನೆ. ಮೃತನ ಮೈಮೇಲಿನ ಬಟ್ಟೆಗಳು: ಬಿಳಿ ಬಣ್ಣದ ಕೆಂಪು ಗೆರೆಯುಳ್ಳ ತುಂಬು ತೋಳಿನ ಚೆಕ್ಸ್ ಅಂಗಿ, ನೀಲಿ ಮತ್ತು ಕಪ್ಪು ಬಣ್ಣದ ಬಿಳಿ ಗೆರೆಯುಳ್ಳ ಚೆಕ್ಸ್ ಲುಂಗಿ, ಕೆಂಪು ಬಣ್ಣದ ಉಡದಾರ ಮತ್ತು ಕಂದು ಬಣ್ಣದ ಒಳುಡುಪು ಧರಿಸಿರುತ್ತಾನೆ. ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರ ಮೊ.9480802131 ಮತ್ತು ರಾಯಚೂರು ರೈಲ್ವೇ ಪೊಲೀಸ್ ವೃತ್ತ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ