ಗುರುವಾರ, ಏಪ್ರಿಲ್ 18, 2024

ಮಹಿಳೆ ಕಾಣೆ: ಪ್ರಕರಣ ದಾಖಲು

ಬಳ್ಳಾರಿ,ಏ.18(ಕರ್ನಾಟಕ ವಾರ್ತೆ): ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಂದನಾ ಕರೋಶಿಯಾ ಎನ್ನುವ 27 ವರ್ಷದ ಮಹಿಳೆ ಏ.15 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪಿಎಸ್‍ಐ ಅವರು ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5.4 ಅಡಿ, ದುಂಡುಮುಖ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಪ್ಪು ಕೂದಲು ಹೊಂದಿರುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಬಣ್ಣದ ಸೀರೆ, ಕೆಂಪು ಬಣ್ಣದ ಕುಪ್ಪಸ ಧರಿಸಿದ್ದು, ಹಿಂದಿ ಭಾಷೆ ಮಾತನಾಡುತ್ತಾಳೆ. ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ದೂ.08392-276063, ಮೊ.9480802131 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ