ಸೋಮವಾರ, ಏಪ್ರಿಲ್ 22, 2024

ಕನಿಷ್ಠ ಬೆಂಬಲ ಬೆಲೆ ಯೋಜನೆ: ಸಿರುಗುಪ್ಪ, ಕುರುಗೋಡು ಖರೀದಿ ಕೇಂದ್ರದಲ್ಲಿ ಗೋಣಿ ಚೀಲಗಳ ಅಭಾವ; ದಾಸ್ತಾನು ತರದಂತೆ ರೈತರಲ್ಲಿ ಮನವಿ

ಬಳ್ಳಾರಿ,ಏ.22(ಕರ್ನಾಟಕ ವಾರ್ತೆ): 2023-24 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುತ್ತಿರುವ ಜೋಳ ದಾಸ್ತಾನಿಗೆ ಸಿರುಗುಪ್ಪ ಮತ್ತು ಕುರುಗೋಡು ಖರೀದಿ ಕೇಂದ್ರಗಳಲ್ಲಿ ಗೋಣಿಚೀಲ ಅಭಾವವಿದ್ದು, ರೈತರು ದಾಸ್ತಾನು ತರದಂತೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಕೀನಾ ಅವರು ತಿಳಿಸಿದ್ದಾರೆ. ಸಿರುಗುಪ್ಪದಲ್ಲಿ 75.013 ಕ್ವಿಂ ಹಾಗೂ ಕುರುಗೋಡಿನಲ್ಲಿ 6939 ಕ್ವಿಂ ಬಿಳಿಜೋಳ ಖರೀದಿಸಲಾಗಿದೆ. ಖರೀದಿ ಕೇಂದ್ರಗಳಿಗೆ ಸರಬರಾಜು ಮಾಡಿದ್ದ ಗೋಣಿ ಚೀಲಗಳು ಖರ್ಚಾಗಿದ್ದು, ಮುಂಗಾರು ಮತ್ತು ಹಿಂಗಾರು ಜೋಳದ ನೋಂದಣಿಯು ಸ್ಥಗಿತವಾಗಿದೆ. ಗೋಣಿ ಚೀಲಗಳು ಖರೀದಿ ಕೇಂದ್ರಕ್ಕೆ ಬಂದಕೂಡಲೇ ಎಲ್ಲಾ ಜೇಷ್ಠತೆಯ ಆಧಾರವಾಗಿ ರೈತರಿಗೆ ದಾಸ್ತಾನು ತರಲು ಸೂಚಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಖರೀದಿ ಅಧಿಕಾರಿ ಹುಸೇನ್ ಸಾಹೇಬ್ ಕುರುಗೋಡು (ಮೊ.8951307333) ಹಾಗೂ ಮೋಹನ ಕುಮಾರ, ಸಿರುಗುಪ್ಪ (ಮೊ.9731421918) ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ