ಬುಧವಾರ, ಏಪ್ರಿಲ್ 17, 2024

ಮತದಾನವು ಸಂವಿಧಾನದ ಹಕ್ಕು

ಬಳ್ಳಾರಿ,ಏ.17(ಕರ್ನಾಟಕ ವಾರ್ತೆ): ಮತದಾನ ಮಾಡುವುದು ನಮ್ಮ ಸಂವಿಧಾನವು ನೀಡಿರುವ ಹಕ್ಕು. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕೆನೆರಾ ಬ್ಯಾಂಕ್ ಎಲ್‍ಡಿಎಂ ಸೋಮನಗೌಡ ಐನಾಪುರ ಅವರು ಹೇಳಿದರು. ಮಂಗಳವಾರದಂದು ಲೀಡ್ ಬ್ಯಾಂಕ್ ಕಚೇರಿ, ಕೆನರಾ ಬ್ಯಾಂಕ್, ಎಎಫ್‍ಎಲ್ ಮತ್ತು ಸಂಜೀವರಾಯನ ಕೋಟೆ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಸ್ವೀಪ್ ಚಟುವಟಿಕೆ ಅಂಗವಾಗಿ ಸಂಜೀವರಾಯನ ಕೋಟೆ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಕಳೆದ ಚುನಾವಣೆಗಿಂತ ಈ ಬಾರಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ನೆರೆಹೊರೆಯವರಿಂದ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಉತ್ತೇಜಿಸಲು ವಿನಂತಿಸಿದರು. ಗ್ರಾಪಂ ಪಿಡಿಒ ಸುಮಾಲತಾ ಅವರು ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನದ ಅಗತ್ಯ ತಿಳಿಯಬೇಕು ಮತ್ತು ಎಲ್ಲಾ ಅರ್ಹ ಮತದಾರರು ಮತದಾನ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಸುದರ್ಶನ್ ರೆಡ್ಡಿ, ಸಿಬಿಆರ್‍ಎಸ್‍ಇಟಿ ನಿರ್ದೇಶಕ ರಾಜೇಸಾಬ್, ಎಫ್‍ಎಲ್‍ಸಿ ದಿನೇಶ್ ಕುಮಾರ್, ಎಲ್‍ಡಿಎಂ ಕಚೇರಿ ಸಿಬ್ಬಂದಿ ರಮೇಶ್, ಬಿ.ಸಿ.ಜಡೇಶ್ ಸೇರಿದಂತೆ 400 ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ