ಶನಿವಾರ, ಏಪ್ರಿಲ್ 20, 2024
ಬಳ್ಳಾರಿ ಲೋಕಸಭಾ ಚುನಾವಣೆ | ಪೆÇಲೀಸ್ ವೀಕ್ಷಕರ ಭೇಟಿಗೆ ಸ್ಥಳ ಬದಲಾವಣೆ
ಬಳ್ಳಾರಿ,ಏ.19(ಕರ್ನಾಟಕ ವಾರ್ತೆ):
09-ಬಳ್ಳಾರಿ (ಪ.ಪಂ) ಲೋಕಸಭಾ ಕ್ಷೇತ್ರ ಚುನಾವಣೆಗೆ ಪೆÇಲೀಸ್ ವೀಕ್ಷಕರಾಗಿ ಧಮೇರ್ಂದ್ರ ಸಿಂಗ್ ಭದೌರಿಯಾ (ಐಪಿಎಸ್) ಅವರ ಮೊ.9141086850 ಮತ್ತು ಲೈಜನಿಂಗ್ ಅಧಿಕಾರಿಯಾಗಿ ಡಿಎಆರ್ ನ ಆರ್‍ಎಸ್‍ಐ ಬಾಹುಬಲಿ ಅವರ ಮೊ.8660672173 ಇವರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕರ ಭೇಟಿಗೆ ಸ್ಥಳವನ್ನು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಪೆÇಲೀಸ್ ವೀಕ್ಷಕರ ಭೇಟಿಗೆ ನಗರದಲ್ಲಿರುವ ನೂತನ ಜಿಲ್ಲಾಡಳಿತ ಭವನದ ಕಚೇರಿಯ ಪಕ್ಕದ ಸರ್ಕಾರಿ ಅತಿಥಿ ಗೃಹ ಮಂದಿರದ ಕೆಳ ಮಹಡಿಯ ಕೊಠಡಿ ಸಂಖ್ಯೆ 03 ರಲ್ಲಿ ಮಧ್ಯಾಹ್ನ 03 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಭೇಟಿ ಮಾಡಬಹುದು.
ಸಾರ್ವಜನಿಕರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅಹವಾಲು ಇದ್ದಲ್ಲಿ, ಸರ್ಕಾರಿ ಕೆಲಸದ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ದಿನಗಳಲ್ಲಿ ಮಾಹಿತಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ