ಬುಧವಾರ, ಏಪ್ರಿಲ್ 17, 2024
ಅನಾಮಧೇಯ ಮೃತ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಏ.17(ಕರ್ನಾಟಕ ವಾರ್ತೆ):
ನಗರದ ರೈಲ್ವೇ ಸ್ಟೇಷನ್ ಮುಂಭಾಗದಲ್ಲಿರುವ ಡಿಲಕ್ಸ್ ಶೌಚಾಲಯದ ಫುಟ್‍ಪಾತ್ ಬಳಿ ಅಂದಾಜು 35-40 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ದೀರ್ಘಾವಧಿಯ ಖಾಯಿಲೆಗೆ ತುತ್ತಾಗಿ ಏ.17 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಗಾಂಧಿನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ 5.2 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಪ್ಪು ಕೂದಲು, ಕಪ್ಪು ಗಡ್ಡ, ಮೀಸೆ ಇರುತ್ತದೆ. ಮೃತನ ಮೈಮೇಲೆ ಆರೆಂಜ್ ಬಣ್ಣದ ಅಂಡರ್‍ವೇರ್ ಇರುತ್ತದೆ.
ಈ ಮೇಲ್ಕಂಡ ಚಹರೆಯುಳ್ಳ ಮೃತನ ಸಂಬಂಧಿಕರ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392258100, ಗಾಂಧಿನಗರ ಪೊಲೀಸ್ ಠಾಣೆಯ ದೂ.08392272192, ಪಿ.ಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ