ಗುರುವಾರ, ಏಪ್ರಿಲ್ 25, 2024

ಅನಾಮಧೇಯ ಮೃತ ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ಏ.25(ಕರ್ನಾಟಕ ವಾರ್ತೆ): ನಗರದ ಮೋತಿ ವೃತ್ತದ ಬಳಿ ಸುಮಾರು 40-45 ವರ್ಷದ ಅನಾಮಧೇಯ ವ್ಯಕ್ತಿ ಏ.22 ರಂದು ಮೃತಪಟ್ಟಿದ್ದು, ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಸಹಾಯಕ ಪೊಲೀಸ್ ಸಬ್ ಇನ್ಸ್‍ಪೇಕ್ಟರ್ ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ 5.4 ಅಡಿ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು 1 ಇಂಚು ಉದ್ದನೆಯ ಕಪ್ಪುಕೊದಲು ಇರುತ್ತದೆ. ಮೃತನ ಮೈಮೇಲೆ ಕೆಂಪು, ನೀಲಿ ಮಿಶ್ರಿತ ಬಣ್ಣದ ಟೀ-ಶರ್ಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತನ ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ದೂ:08392272022, ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಮೊ:9480803081 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ:08392258100/258102 ಗೆ ಸಂರ್ಪಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ