ಮಂಗಳವಾರ, ಏಪ್ರಿಲ್ 30, 2024
ಸಿಂಧಿಗೇರಿ: ಮನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ | ಮೇ 07 ರಂದು ಮತದಾನ ಹಬ್ಬ ಆಚರಿಸಿ: ಕೆ.ವಿ.ನಿರ್ಮಲಾ
ಬಳ್ಳಾರಿ,ಏ.30(ಕರ್ನಾಟಕ ವಾರ್ತೆ):
ಮೇ 07 ರಂದು ನಡೆಯುವ ಲೋಕಸಭೆ ಚುನಾವಣೆಗೆ ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ದಿನದ ಹಬ್ಬ ಆಚರಿಸುವಂತೆ ಕುರುಗೋಡು ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಓ ಕೆ.ವಿ.ನಿರ್ಮಲಾ ಅವರು ಹೇಳಿದರು.
ಕುರುಗೋಡು ತಾಲ್ಲೂಕಿನ ಸಿಂಧಿಗೇರಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ’ ಎಂಬ ಆಶಯದೊಂದಿಗೆ ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯವಾಗಿದ್ದು, ಸಂವಿಧಾನ ಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ತಪ್ಪದೇ ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮತದಾನದ ಮೂಲಕ ಅರ್ಹರನ್ನು ಆಯ್ಕೆ ಮಾಡಲು ಇರುವ ಒಂದು ಅಸ್ತ್ರವಾಗಿದೆ ಎಂದು ಅರಿವು ಮೂಡಿಸಿದರು.
ಈ ವೇಳೆ ಮತದಾರರ ಪ್ರತಿಜ್ಞೆ ವಿಧಿ ಬೋಧಿಸುವುದರ ಮೂಲಕ ಕೂಲಿಕಾರರಿಗೆ ಮತದಾನದ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಾಧಿಕಾ, ಗ್ರಾಪಂ ಕಾರ್ಯದರ್ಶಿ ಸೋಮಲಿಂಗಪ್ಪ, ಟಿಎಂಐಎಸ್ ಮುಕ್ತಾಯಕ್ಕ, ಐಇಸಿ ಚಂದ್ರಶೇಖರ್, ಎನ್‍ಆರ್‍ಎಲ್‍ಎಂ ತಂಡ, ಬಿಎಫ್‍ಟಿ, ಗ್ರಾಮಕಾಯಕ ಮಿತ್ರರು, ಸ್ವ ಸಹಾಯ ಸಂಘದ ಸದಸ್ಯರು, ಗ್ರಾಪಂ ಸಿಬ್ಬಂದಿಯವರು ಸೇರಿದಂತೆ ಸಿಂಧಿಗೇರಿ ಗ್ರಾಮದ ಕೂಲಿಕಾರರು ಹಾಜರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ