ಶುಕ್ರವಾರ, ಏಪ್ರಿಲ್ 19, 2024

ಬಳ್ಳಾರಿ ಲೋಕಸಭಾ ಚುನಾವಣೆ ಸಾಮಾನ್ಯ ವೀಕ್ಷಕರು, ಪೆÇಲೀಸ್ ವೀಕ್ಷಕರ ಆಗಮನ: ಸಾರ್ವಜನಿಕರ ಭೇಟಿಗೆ ಅವಕಾಶ

ಬಳ್ಳಾರಿ,ಏ.19(ಕರ್ನಾಟಕ ವಾರ್ತೆ): 09-ಬಳ್ಳಾರಿ (ಪ.ಪಂ) ಲೋಕಸಭಾ ಕ್ಷೇತ್ರ ಚುನಾವಣೆಗೆ ಸಾಮಾನ್ಯ ವೀಕ್ಷಕರು ಮತ್ತು ಪೆÇಲೀಸ್ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಸಾಮಾನ್ಯ ವೀಕ್ಷಕರಾಗಿ ಚಂದ್ರಶೇಖರ್ ಸಖಮುರಿ (ಐಎಎಸ್) ಅವರ ಮೊ.9141086849 ಮತ್ತು ಲೈಜನಿಂಗ್ ಅಧಿಕಾರಿಯಾಗಿ ಕಾರ್ಖಾನೆಗಳು ಮತ್ತು ಬಾಯ್ಲರುಗಳು ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಾಯಕ ನಿರ್ದೇಶಕ ವರುಣ್.ಆರ್ ಅವರ ಮೊ.9480114600 ಇವರು ಬಳ್ಳಾರಿ ಜಿಲ್ಲಾ ಕೇಂದ್ರಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಲಭ್ಯವಿರುತ್ತಾರೆ. ಇವರನ್ನು ಬಳ್ಳಾರಿ ನಗರದಲ್ಲಿರುವ ನೂತನ ಜಿಲ್ಲಾಡಳಿತ ಭವನದ ಕಚೇರಿಯ ಪಕ್ಕದ ಸರ್ಕಾರಿ ಅತಿಥಿ ಗೃಹ ಮಂದಿರದ ಕೆಳ ಮಹಡಿಯ ಕೊಠಡಿ ಸಂಖ್ಯೆ 02 ರಲ್ಲಿ ಮಧ್ಯಾಹ್ನ 03 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು. ಪೆÇಲೀಸ್ ವೀಕ್ಷಕರಾಗಿ ಧಮೇರ್ಂದ್ರ ಸಿಂಗ್ ಭದೌರಿಯಾ (ಐಪಿಎಸ್) ಅವರ ಮೊ.9141086850 ಮತ್ತು ಲೈಜನಿಂಗ್ ಅಧಿಕಾರಿಯಾಗಿ ಡಿಎಆರ್ ನ ಆರ್‍ಎಸ್‍ಐ ಬಾಹುಬಲಿ ಅವರ ಮೊ.8660672173 ಇವರು ಬಳ್ಳಾರಿ ಜಿಲ್ಲಾ ಕೇಂದ್ರಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಲಭ್ಯವಿರುತ್ತಾರೆ. ಇವರನ್ನು ಬಳ್ಳಾರಿ ನಗರದ ಪಾರ್ವತಿನಗರದ ಪೆÇಲೀಸ್ ಜಿಮ್‍ಖಾನದ ಕೊಠಡಿ ಸಂಖ್ಯೆ 01 ರಲ್ಲಿ ಮಧ್ಯಾಹ್ನ 03 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು. ಸಾರ್ವಜನಿಕರಿಗೆ, ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅಹವಾಲು ಇದ್ದಲ್ಲಿ, ಸರ್ಕಾರಿ ಕೆಲಸದ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ದಿನಗಳಲ್ಲಿ ಮಾಹಿತಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ