ಗುರುವಾರ, ಜೂನ್ 6, 2024

ಜೂ.08 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.06(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 33/11ಕೆ.ವಿ ಗುಡದೂರು ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11ಕೆ.ವಿ ಮಾರ್ಗಗಳಲ್ಲಿ ಜೂ.08 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನ್‍ಬಾಬು ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-01 ಡಿ.ಕಗ್ಗಲ್ ಐಪಿ ಮಾರ್ಗದ ಡಿ.ಕಗ್ಗಲ್ ಕೃಷಿ ಪ್ರದೇಶಗಳು. ಎಫ್-02 ಗುಡುದೂರು ಐಪಿ ಮಾರ್ಗದ ಗುಡುದೂರು, ಹಂದಿಹಾಳ್ ಕೃಷಿ ಪ್ರದೇಶಗಳು. ಎಫ್-03 ಹಂದಿಹಾಳ್ ಐಪಿ ಮಾರ್ಗದ ಹಂದಿಹಾಳ್ ಚಾನಾಳ್ ಕೃಷಿ ಪ್ರದೇಶಗಳು. ಎಫ್-4 ಗುಡುದೂರು ಎನ್.ಜೆ.ವೈ ಮಾರ್ಗದ ಹಂದಿಹಾಳ್, ಚಾನಾಳ್, ಗುಡುದೂರು ಗ್ರಾಮಗಳು. ಎಫ್-05 ಚಾನಾಳ್ ಐಪಿ ಮಾರ್ಗದ ಚಾನಾಳ್ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ