ಗುರುವಾರ, ಜೂನ್ 6, 2024
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜೂ.06(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಳ್ಳಾರಿ-ಹೊಸಪೇಟೆ ರಸ್ತೆ ರಾಮೇಶ್ವರ ನಗರಕ್ಕೆ ಹೋಗುವ ಮುಖ್ಯದಾರಿ ಕಮಾನ್ ಹತ್ತಿರದಲ್ಲಿ ಸುಮಾರು 50 ರಿಂದ 55 ವರ್ಷದ ಅನಾಮಧೇಯ ವ್ಯಕ್ತಿಯು ಮೇ 30 ರಂದು ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಎಎಸ್‍ಐ ಅವರು ಮನವಿ ಮಾಡಿದ್ದಾರೆ.
ಚಹರೆ ಗುರುತು: ಎತ್ತರ ಸುಮಾರು 5.5 ಅಡಿ, ಕೋಲುಮುಖ, ಕಪ್ಪು ಮೈಬಣ್ಣ, ತೆಳ್ಳನೇಯ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಅಂದಾಜು 2 ರಿಂದ 3 ಇಂಚು ಉದ್ದದ ಬಿಳಿ ಕೂದಲು ಹಾಗೂ ಕುರುಚಲು ಗಡ್ಡ ಹೊಂದಿರುತ್ತಾನೆ.
ಮೃತನ ಮೈಮೇಲೆ ನೀಲಿ ಬಣ್ಣದ ಕಟ್ ಬನಿಯನ್ ಮತ್ತು ಹಸಿರು ಬಣ್ಣದ ಒಳ ಉಡುಪು ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಪಿಐ ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-248100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ