ಬುಧವಾರ, ಜೂನ್ 12, 2024
ಜೂ.15 ರಂದು ‘ತಿಂಗಳ ಸೊಬಗು’ ಸಾಂಸ್ಕøತಿಕ ಕಾರ್ಯಕ್ರಮ
ಬಳ್ಳಾರಿ,ಜೂ.12(ಕರ್ನಾಟಕ ವಾರ್ತೆ):
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಸಾಂಸ್ಕøತಿಕ ಸಮುಚ್ಛಯ ನಿರ್ವಹಣಾ ಸಮಿತಿ ವತಿಯಿಂದ ಕಲಾ ಪ್ರತಿಭೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಜೂನ್ 15 ರಂದು ಸಂಜೆ 06.30 ಗಂಟೆಗೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರ ಸಾಂಸ್ಕøತಿಕ ಸಮುಚ್ಛಯದಲ್ಲಿ ‘ತಿಂಗಳ ಸೊಬಗು’ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಿರುಗುಪ್ಪದ ಕೆ.ನರಸಿಂಹಮೂರ್ತಿ ಅವರಿಂದ ಹಾಸ್ಯ ಚಟಾಕಿಗಳು, ಸುಜಾತ ಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ ಮತ್ತು ಜೀ ಕನ್ನಡ ಸರಿಗಮಪ ಸೀಜನ್ 19 ಸ್ಪರ್ಧಾಳು ಕುಮಾರಿ ಸೃಷ್ಠಿ ಸುರೇಶ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಇರಲಿವೆ.
ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ವೀಕ್ಷಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕೋರಲಾಗಿದೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ