ಶನಿವಾರ, ಜೂನ್ 1, 2024
ಅಂಧ ಹಾಗೂ ಶ್ರವಣ ದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಪ್ರವೇಶಾತಿ: ಅರ್ಜಿ ಆಹ್ವಾನ
ಬಳ್ಳಾರಿ,ಜೂ.01(ಕರ್ನಾಟಕ ವಾರ್ತೆ):
ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ 2 ವರ್ಷಗಳ ಡಿ.ಇಡಿ ವ್ಯಾಸಂಗಕ್ಕೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಜೂನ್ 10 ಒಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಡಿ.ಇಡಿ ವ್ಯಾಸಂಗವು ಸಾಮಾನ್ಯ ಡಿ.ಇಡಿ ಪದವಿಗೆ ಸಮವಾಗಿದ್ದು, ಅರ್ಹ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.50 (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಶೇಷಚೇತನ ವಿದ್ಯಾರ್ಥಿಗಳಿಗೆ ಶೇ.45) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅರ್ಜಿಗಳ ಕುರಿತು ಮಾಹಿತಿಗಾಗಿ https:/mysore.nic.in/en/ ಅಂತರ್ಜಾಲಕ್ಕೆ ಭೇಟಿ ನೀಡಬಹುದು.
*ಶುಲ್ಕ ವಿವರ:*
ಶ್ರವಣದೋಷವುಳ್ಳ ಮಕ್ಕಳಗೆ ಬೋಧಿಸುವ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಂಧ ಮಕ್ಕಳ ಬೋಧಕರ ತರಬೇತಿ ಕಾರ್ಯಕ್ರಮದಲ್ಲಿ ಎಸ್‍ಸಿ, ಎಸ್‍ಟಿ ಮತ್ತು ವಿಶೇಷಚೇತನ ವ್ಯಕ್ತಿಗಳಿಗೆ ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ.
*ಉದ್ಯೋಗ ಅವಕಾಶಗಳು:*
ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಹಲವು ಉದ್ಯೋಗ ಅವಕಾಶಗಳಿರುತ್ತದೆ.ರಾಜ್ಯ ಸರ್ಕಾರದ ಸಾಮಾನ್ಯ ಶಾಲೆ ಮತ್ತು ವಿಶೇಷ ಶಾಲೆಗಳೆರಡರಲ್ಲೂ ಶಿಕ್ಷಕರಾಗಬಹುದು. ವಿಶೇಷಚೇತನರ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಬಹುದು. ಸಿಬಿಎಸ್‍ಸಿ ಶಾಲೆಗಳಲ್ಲಿ ಶಿಕ್ಷಕರಾಗಬಹುದು. ಸರ್ವ ಶಿಕ್ಷಕಣ ಅಭಿಯಾನದಲ್ಲಿ ಸಂಪೂನ್ಮೂಲ ಶಿಕ್ಷಕರಾಗಬಹುದು. ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪೂನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಬಹುದು. ರಾಷ್ಟ್ರೀಯ ಸಂಸ್ಥೆಗಳು, ಪ್ರಾದೇಶಿಕ ಸಂಸ್ಥೆಗಲ್ಲಿ ಸಂಪೂನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಬಹುದು.
*ಬೇಕಾದ ದಾಖಲೆಗಳು*:
ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ವಿಕಲಚೇತನ ವ್ಯಕ್ತಿಯಾಗಿದ್ದಲ್ಲಿ ಯುಡಿಐಡಿ ಗುರುತಿನ ಪತ್ರ.
*ತರಬೇತಿ ವಿವರ:*
ಹೆಲೆನ್ ಕೆಲ್ಲರ್ ಅಂಧ ಮಕ್ಕಳ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ D.Ed.Spl.Ed.(VI) ವಿಶೇಷ ಶಿಕ್ಷಣದಲ್ಲಿ ಡಿಪ್ಲೋಮಾ (ದೃಷ್ಠಿದೋಷವುಳ್ಳ, ಸಾಮಾನ್ಯ ಮಕ್ಕಳಿಗೆ ಶಿಕ್ಷಕರಾಗಲು) ತರಬೇತಿಯು ಎರಡು ವರ್ಷಗಳ ಕಾಲಾವಧಿ ಇದ್ದು, ಪಿ.ಯು.ಸಿ ಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಎಸ್, ಎಸ್‍ಟಿ ಮತ್ತು ವಿಕಲಚೇತನರು ಶೇ.45 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ದೃಷ್ಠಿದೋಷವುಳ್ಳವರು, ವಿಕಲಚೇತನರು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರವೇಶವಿರುತ್ತದೆ. ಬೋದನಾ ಶುಲ್ಕವಿರುತ್ತದೆ. ಎಸ್‍ಸಿ, ಎಸ್‍ಟಿ ವಿಕಲಚೇತನರಿಗೆ ಶುಲ್ಕ ಮರುಪಾವತಿ ಸೌಲಭ್ಯವಿರುತ್ತದೆ.
ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ D.Ed.Spl.Ed.(HH) ವಿಶೇಷ ಶಿಕ್ಷಣದಲ್ಲಿ ಡಿಪ್ಲೋಮಾ (ಶ್ರವಣದೋಷವುಳ್ಳ, ಸಾಮಾನ್ಯ ಮಕ್ಕಳಿಗೆ ಶಿಕ್ಷಕರಾಗಲು) ತರಬೇತಿಯು ಎರಡು ವರ್ಷದ ಅವಧಿಯಾಗಿದೆ. ಪಿ.ಯು.ಸಿ ಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಎಸ್, ಎಸ್‍ಟಿ ಮತ್ತು ವಿಕಲಚೇತನರು ಶೇ.45 ರಷ್ಟು ಪಡೆದವರು ಅರ್ಹರಾಗಿರುತ್ತಾರೆ. ದೈಹಿಕ ವಿಕಚೇತನರು, ಶ್ರವಣದೋಷವುಳ್ಳವರು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರವೇಶವಿರುತ್ತದೆ. ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೈಸೂರಿನ ತಿಲಕ್ ನಗರದ ಪುಲಿಕೇಶಿ ರಸ್ತೆಯ ಸರ್ಕಾರಿ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ತರಬೇತಿಯ ಉಪ ನಿರ್ದೇಶಕರ ಕಚೇರಿ ಮತ್ತು ದೂ:2491600, 08212959600 ಅಥವಾ ಆಶಾ.ವಿ ಹಿರೇಮಠ್ ಅವರ ಮೊ: 9113561620, ತರಬೇತಿ ಉಪನ್ಯಾಸಕರು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ವಿಭಾಗದ ಟಿ.ಡಿ.ಮಂಜುನಾಥ ಅವರ ಮೊ.9686762371, ಮುರಳಿ ಮೊ.7829115275, ಉಮೇಶ್.ಡಿ ಮೊ.9743503262, ಉಷಾರಾಣಿ ಎಸ್.ಎನ್ ಮೊ.6362962400, ಮಹಾದೇವನಾಯಕ.ಕೆ ಮೊ.9611773697 ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ