ಗುರುವಾರ, ಜೂನ್ 6, 2024
ಯುವಕ ಕಾಣೆ
ಬಳ್ಳಾರಿ,ಜೂ.06(ಕರ್ನಾಟಕ ವಾರ್ತೆ):
ಕೌಲ್‍ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮೀರ್ ಅಲಿ ಎನ್ನುವ 23 ವರ್ಷದ ಯುವಕ ಜೂ.01 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಸಹಾಯಕ ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ ಗುರುತು: ಅಂದಾಜು 5.8 ಅಡಿ ಎತ್ತರ, ದೃಢವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಎಡಗೈ ಮೇಲೆ ಸಣ್ಣ ಕರಿಮಚ್ಚೆ ಇರುತ್ತದೆ.
ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಪ್ಯಾಂಟ್‍ಮತ್ತು ಪಿಂಕ್ ಮತ್ತು ಬಿಳಿ ಅಡ್ಡಗೆರೆಯುಳ್ಳ ಫುಲ್ ಅಂಗಿ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.
ಕಾಣೆಯಾದ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ.08392-240731, ಪಿಐ ಮೊ.9480803047, ಪಿಎಸ್‍ಐ ಮೊ.9480803085 ಅಥವಾ ಬಳ್ಳಾರಿ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ