ಶನಿವಾರ, ಅಕ್ಟೋಬರ್ 5, 2024
ಕುರುಗೋಡು ಪುರಸಭೆ: ಆಕ್ಷೇಪಣೆಗಳಿಗೆ ಆಹ್ವಾನ
ಬಳ್ಳಾರಿ,ಅ.05(ಕರ್ನಾಟಕ ವಾರ್ತೆ):
ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಮಕ್ಕಳ ಮನೆ ಸಮೀಕ್ಷೆ (ಓಎಸ್‌ಎಸ್ ಸರ್ವೇ) ಕಾರ್ಯ ಪೂರ್ಣಗೊಳಿಸಿದ್ದು, ವಿವರಗಳಿಗೆ ಸಂಬAಧಿಸಿದAತೆ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಲ್ಲಿಸಬಹುದು ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿ ಹರ್ಷವರ್ಧನ ಅವರು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಕ್ರೂಢೀಕೃತ ಮಾಹಿತಿ/ವಿವರಗಳನ್ನು ಸೆಂಟರ್ ಫಾರ್ ಇ-ಗವರ್ನೆನ್ಸ್ ಇಲಾಖೆಯ ವೆಬ್‌ಸೈಟ್ ಹಾಗೂ ಕಚೇರಿ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ಸಮೀಕ್ಷೆಯಲ್ಲಿ ಬಿಟ್ಟು ಹೋದ ವಿವರಗಳಿದ್ದಲ್ಲಿ ಅಥವಾ ಸಮೀಕ್ಷೆಯ ವಿವರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಗೊಂಡ ದಿನದಿಂದ 15 ದಿನಗಳೊಳಗಾಗಿ ಪುರಸಭೆ ಕಚೇರಿಗೆ ವಿವರಗಳೊಂದಿಗೆ ಲಿಖಿತವಾಗಿ ಸಲ್ಲಿಸಬಹುದು.
ನಿಗಧಿತ ದಿನಾಂಕದ ನಂತರ ಬಂದAತಹ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ