ಸೋಮವಾರ, ಮೇ 25, 2026
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ 10 ದಿನಗಳ ರಂಗಭೂಮಿ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ
ಬಳ್ಳಾರಿ,ಮೇ 25(ಕರ್ನಾಟಕ ವಾರ್ತೆ):
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ “ಜ್ಞಾನ ಸಾಗರ” ಆವರಣದ ಪ್ರದರ್ಶನ ಕಲೆಗಳ ನಾಟಕ ವಿಭಾಗದ ವತಿಯಿಂದ ದಿವಂಗತ ಶ್ರೀಮತಿ ರಮಣಿಕಾ ಗುಪ್ತಾ ಅವರ ನೆನಪಿನ ಕಾರ್ಯಕ್ರಮದ ಅಂಗವಾಗಿ 10 ದಿನಗಳ ಕಾಲ ರಂಗಭೂಮಿ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ತರಬೇತಿ ಶಿಬಿರ ಮತ್ತು ಕಾರ್ಯಾಗಾರವು ಜೂನ್ 1 ರಿಂದ ಜೂನ್ 10 ರವರೆಗೆ ವಿಶ್ವವಿದ್ಯಾಲಯದ ನಾಟಕ ವಿಭಾಗದಲ್ಲಿ ಜರುಗಲಿದೆ. 10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಟಕ ರಚನೆ, ನಿರ್ದೇಶನ, ಕಿರುಚಿತ್ರಗಳ ನಿರ್ಮಾಣ, ಅಭಿನಯ ಹಾಗೂ ರಂಗಭೂಮಿಗೆ ಸಂಬAಧಿಸಿದ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
ಕಾರ್ಯಾಗಾರದ ಪ್ರತಿದಿನ ಬೆಳಿಗ್ಗೆ 10 ರಿಂದ 11.30 ರವರೆಗಿನ ಮೊದಲ ಅವಧಿಯಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ತರಬೇತಿ ನೀಡಲಿದ್ದಾರೆ.
ಜೂನ್ 1 ರಂದು ಉದ್ಘಾಟನಾ ಸಮಾರಂಭ, ನಾಟಕ/ಕಿರುಚಿತ್ರ ಹಾಗೂ ನಾಟಕ ತರಬೇತಿ (ಸಂಪನ್ಮೂಲ ವ್ಯಕ್ತಿ: ಎನ್. ಮಹೇಶ್), ಜೂನ್ 2 ರಂದು ಮೊಬೈಲ್ ಚಿತ್ರಗಳನ್ನು ಸೆರೆಹಿಡಿಯುವುದು (ಸಂಪನ್ಮೂಲ ವ್ಯಕ್ತಿ: ಶೃತಿ) ಮತ್ತು ರಂಗತAಡಗಳ ಕುರಿತು ಮಾಹಿತಿ. ಜೂನ್ 3 ರಂದು ಅಭಿನಯ ಮತ್ತು ಮೂಕಾಭಿನಯದ ತರಬೇತಿ.
ಜೂನ್ 4 ರಂದು ನಿರ್ದೇಶನ ಮತ್ತು ಹೊಸ ಮಾದರಿಗಳ ಅನ್ವೇಷಣೆ. ಜೂನ್ 5 ರಂದು ರಂಗ ಸಂಗೀತದ ಕುರಿತು ವಿಶೇಷ ತರಗತಿ. ಜೂನ್ 6 ರಂದು ರಂಗಭೂಮಿಯ ಸವಾಲುಗಳು ಮತ್ತು ಜನಪದ ರಂಗಭೂಮಿ. ಜೂನ್ 7 ರಂದು ವಿಡಿಯೋ ಮತ್ತು ಆಡಿಯೋ ಸಂಕಲನ ಹಾಗೂ ಬಯಲಾಟ (ಸಂಪನ್ಮೂಲ ವ್ಯಕ್ತಿ: ತಿಪ್ಪೇಸ್ವಾಮಿ). ಜೂನ್ 8 ರಂದು ನಾಟಕಗಳ ಓದು, ಅರ್ಥೈಸಿಕೊಳ್ಳುವಿಕೆ, ರಂಗ ವಿನ್ಯಾಸ ಮತ್ತು ಕಲಾವಿದರ ಮುಖಾಮುಖಿ (ಸಂಪನ್ಮೂಲ ವ್ಯಕ್ತಿ: ಅಧೋನಿ ವೀಣಾ). ಜೂನ್ 9 ರಂದು ಕಲೆ ಮತ್ತು ಕಲಾವಿದರು ಹಾಗೂ ಸಂಸ್ಕೃತಿ ಮತ್ತು ಕಲೆ (ಸಂಪನ್ಮೂಲ ವ್ಯಕ್ತಿ: ಡಾ. ಸುಜಾತ ಜಂಗಮಶೆಟ್ಟಿ). ಜೂನ್ 10 ರಂದು ಸಮಾರೋಪ ಸಮಾರಂಭ ನಡೆಯಲಿದೆ.
ರಂಗಭೂಮಿ ಮತ್ತು ಕಿರುಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿರುವ ಅಭ್ಯರ್ಥಿಗಳು ತಮ್ಮ ಪರಿಚಯ ಪತ್ರ (ಬಯೋಡೇಟಾ) ಹಾಗೂ ರಂಗಭೂಮಿ ಹಿನ್ನೆಲೆಯ ಅನುಭವದ ವಿವರಗಳನ್ನು (ಇದ್ದಲ್ಲಿ) ಮೇ 30 ರ ಒಳಗಾಗಿ ಮುಖ್ಯಸ್ಥರು, ನಾಟಕ ವಿಭಾಗ, ವಿ.ಶ್ರೀ.ಕೃ.ದೇ.ವಿ. ಬಳ್ಳಾರಿ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.9449021006, 7676132277 ಗೆ ಸಂಪರ್ಕಿಸಬಹುದಾಗಿದೆ ಎಂದು ವಿವಿ ಯ ಪ್ರದರ್ಶನ ಕಲೆ ವಿಭಾಗದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ