ಸೋಮವಾರ, ಮೇ 18, 2026

ಮೇ 20 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಮೇ 18(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗದ ವ್ಯಾಪ್ತಿಯಲ್ಲಿ ತುರ್ತು ಮತ್ತು ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿAದ ಮೇ 20 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 33/11ಕೆ.ವಿ ಎರ್ರಗುಡಿ ಉಪ-ಕೇಂದ್ರದಲ್ಲಿ ಹಳೆಯದಾದ ಜಿ.ಒ.ಎಸ್ ಬದಲಾಯಿಸುವ ಕಾರ್ಯ, ತ್ರೆöÊಮಾಸಿಕ ನಿರ್ವಹಣೆ, ದುರಸ್ತಿ ಹಾಗೂ ಲೈನ್‌ಗಳ ಮೇಲಿರುವ ಜಂಗಲ್ ಕಟ್ಟಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಮಾರ್ಗಗಳು ಹಾಗೂ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್‌01 - ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿ.ಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಹಳ್ಳಿ, ಜಾಲಿಚಿಂತೆ ಕೃಷಿ ಪ್ರದೇಶಗಳು. ಎಫ್‌02 - ಜಿ.ಎನ್.ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಹಳ್ಳಿ ಕೃಷಿ ಪ್ರದೇಶಗಳು. ಎಫ್‌03 - ಹಳೇ ಎರ್ರಗುಡಿ ಐಪಿ ಮಾರ್ಗದ ಹಳೇ ಎರ್ರಗುಡಿ, ಹೊಸ ಎರ್ರಗುಡಿ, ಸಿಂಧುವಾಳ, ಬೆಣಕಲ್ಲು ಕೃಷಿ ಪ್ರದೇಶಗಳು. ಎಫ್‌04 - ವೇದಾವತಿ ಐಪಿ ಮಾರ್ಗದ ಡಿ.ಎನ್.ಹಳ್ಳಿ, ಮೋಕಾ ಕೃಷಿ ಪ್ರದೇಶಗಳು. ಎಫ್‌05 - ಸಿಂಧುವಾಳ, ಸೋಲಾರ್ ಮಾರ್ಗದ ಹಳೇ ಎರ್ರಗುಡಿ, ಹೊಸ ಎರ್ರಗುಡಿ, ಸಿಂಧುವಾಳ, ಬೆಣಕಲ್ಲು, ಗೋನಾಳ್, ಜಾಲೀಹಾಳ್, ಬೊಮ್ಮನಹಾಳ್ ಗ್ರಾಮಗಳು. ಎಫ್‌06 - ಜಾಲೀಹಾಳ್ ಐಪಿ ಮಾರ್ಗದ ಎಸ್. ಗೋನಾಳ್, ಜಾಲೀಹಾಳ್, ಬೊಮ್ಮನಹಾಳ್ ಕೃಷಿ ಪ್ರದೇಶಗಳು. ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಹಾಗೂ ರೈತ ಬಾಂಧವರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ