ಶುಕ್ರವಾರ, ಮೇ 29, 2026

ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ): ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನಾಮಧೇಯ ವ್ಯಕ್ತಿಯ ಶವವು ಮೇ 27 ರಂದು ಜಾಗೃತಿನಗರ ರಸ್ತೆಯ ರಾಯಲ್ ಬಿ.ಎಡ್ ಕಾಲೇಜಿನ ಹಿಂದುಗಡೆ ಇರುವ ನೀರಿನ ಕುಂಟೆಯ ಹಿಂಭಾದ ಖಾಲಿ ಜಾಗದಲ್ಲಿ ಪತ್ತೆಯಾಗಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ ಗುರುತು: ಕೊಳೆತ ಬುರುಡೆ, ಎಲುಬು ಮತ್ತು ಮೂಳೆಗಳು ಮಾತ್ರ ಇದ್ದು, ಮೃತ ದೇಹದ ಮೇಲೆ ಒಂದು ಕೆಂಪು ಬಣ್ಣದ ಟಿ-ಶರ್ಟ್ ಮತ್ತು ಒಂದು ಬೂದಿ ಬಣ್ಣದ ಬನಿಯನ್ ಇರುತ್ತದೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ಪಿಐ ಮೊ.9480803047, ಪಿಎಸ್‌ಐ ಮೊ.9480803084, ದೂ.08392-240731 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ======

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ