ಬುಧವಾರ, ಮೇ 27, 2026

ಬಳ್ಳಾರಿ: ಇಪಿಎಫ್ ಸೌಲಭ್ಯದಿಂದ ವಂಚಿತರಾದ ‘ಎಸ್&ಪಿ ಸ್ಟçಕ್ಚರಲ್ಸ್’ ಕಾರ್ಮಿಕರಿಗೆ ದಾಖಲೆ ಸಲ್ಲಿಸಲು ಅವಕಾಶ

ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ): ಇಲ್ಲಿನ ಭವಿಷ್ಯ ನಿಧಿ ಭವನದ ಪ್ರಾದೇಶಿಕ ಕಚೇರಿಯು ಮೆಸರ್ಸ್ ಎಸ್ ಮತ್ತು ಪಿ ಸ್ಟçಕ್ಚರಲ್ಸ್ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯ ವಿಚಾರಣೆ ಕೈಗೆತ್ತಿಕೊಂಡಿದ್ದು, ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ಉಪಬಂಧಗಳ ಅಧಿನಿಯಮ, 1952 ರ ಕಲಂ 7ಎ ಅಡಿಯಲ್ಲಿ ಭಾಗಶಃ-ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ. ಪ್ರವೀಣ್ ಅವರು ತಿಳಿಸಿದ್ದಾರೆ. *ಪ್ರಕರಣದ ಹಿನ್ನೆಲೆ:* ಈ ಸಂಸ್ಥೆಯಲ್ಲಿ ಜನವರಿ 2010 ರಿಂದ ಫೆಬ್ರವರಿ 2013 ರವರೆಗಿನ ಅವಧಿಗೆ ಬಾಕಿ ಇರುವ ಪಿಎಫ್ ಮೊತ್ತವನ್ನು ನಿಗದಿಪಡಿಸುವ ಕುರಿತು ಇಪಿಎಫ್ ಕೋಡ್ ಸಂಖ್ಯೆ: ಜಿಬಿಬಿಎಲ್‌ಆರ್/0028905 ಗೆ ಸಂಬAಧಿಸಿದAತೆ ಈ ವಿಚಾರಣೆ ಪ್ರಗತಿಯಲ್ಲಿದೆ. ಮೇಲ್ಕಂಡ ಅವಧಿಯಲ್ಲಿ (01/2010 ರಿಂದ 02/2013) ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಹಾಗೂ ತಿಂಗಳಿಗೆ ರೂ.6,500 ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆದಿದ್ದರೂ, ನೌಕರರ ಭವಿಷ್ಯ ನಿಧಿ ಸೌಲಭ್ಯವನ್ನು ಪಡೆಯದ ಯಾವುದೇ ವ್ಯಕ್ತಿಗಳು, ಕಾರ್ಮಿಕರು ತಮ್ಮ ಹಕ್ಕನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. *ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:* ಅರ್ಹ ಕಾರ್ಮಿಕರು ಈ ದಾಖಲೆಗಳೊಂದಿಗೆ ಸ್ವತಃ ಹಾಜರಾಗಬಹುದು ಅಥವಾ ಕಳುಹಿಸಿಕೊಡಬಹುದು. ನೇಮಕಾತಿ ಆದೇಶ, ಸಂಸ್ಥೆಯಿAದ ನೀಡಲಾದ ಗುರುತಿನ ಚೀಟಿ, ವೇತನ ಚೀಟಿ ಅಥವಾ ಇತರೆ ಸಂಬAಧಿತ ದಾಖಲೆಗಳು. ಅರ್ಹ ವ್ಯಕ್ತಿಗಳು ತಮ್ಮ ಮಾನ್ಯ ದಾಖಲೆಗಳೊಂದಿಗೆ ಜೂನ್ 15 ರೊಳಗಾಗಿ ಕೆಳಗಿನ ವಿಳಾಸದಲ್ಲಿ ಸ್ವತಃ ಹಾಜರಾಗಬಹುದು ಅಥವಾ ಅಂಚೆ ಮೂಲಕ ಕಳುಹಿಸಬಹುದು. ಇಲ್ಲವೇ ಇಮೇಲ್ ವಿಳಾಸ ro.bellary@epfindia.gov.in ಮೂಲಕವೂ ಕಳುಹಿಸಬಹುದಾಗಿದೆ. *ವಿಳಾಸ:* ಪ್ರಾದೇಶಿಕ ಕಚೇರಿ, ಭವಿಷ್ಯ ನಿಧಿ ಭವನ, ಸ.ನಂ. 872, 873 ಮತ್ತು 876, ಮುಖ್ಯ ರಸ್ತೆ, 2ನೇ ಹಂತ, ರಾಘವೇಂದ್ರ ಕಾಲೋನಿ, ಬಳ್ಳಾರಿ – 583101. ಯಾವುದೇ ವ್ಯಕ್ತಿ ನಿಗದಿತ ಅವಧಿಯೊಳಗೆ ಹಾಜರಾಗದಿದ್ದಲ್ಲಿ, ಕಚೇರಿಯಲ್ಲಿ ಲಭ್ಯವಿರುವ ಸಾಕ್ಷಾö್ಯಧಾರಗಳ ಆಧಾರದ ಮೇಲೆ ವಿಚಾರಣೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ